ದಿನಾಂಕ: 19/01/2025 ಆದಿತ್ಯವಾರದಂದು ಸಿ, ಎಫ್, ಸಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನರ್ಲಡ್ಕ ಕ್ರೀಡಾಂಗಣದಲ್ಲಿ ಕರಿಂಬಿಲ ಪ್ರಿಮಿಯರ್ ಲೀಗ್ ಹಾಗೂ ಅಂಗನವಾಡಿ ಟೀಚರ್ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು “ರಾಮಣ್ಣ ಜಾಲ್ತಾರು” ಅಧ್ಯಕ್ಷರು ಗ್ರಾಮ ಪಂಚಾಯತ್ ಎಡಮಂಗಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು “ಉಬೈಸ್ ಎಂ” ಅಧ್ಯಕ್ಷರು ಸಿ.ಎಫ್.ಸಿ.ಕರಿಂಬಿಲ ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಘುನಾಥ ರೈ ಕಟ್ಟಬೀಡು, ಪ್ರಸನ್ನ ಭಟ್, ಇಬ್ರಾಹಿಂ ಕಜೆ, ಪ್ರಕಾಶ್ ರೈ ಉಪಸ್ಥಿತರಿದ್ದರು
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾಯಿಲಾಪ್ಪ ಗೌಡ ಸದಸ್ಯರು ಗ್ರಾಮ ಪಂಚಾಯತ್ ಎಡಮಂಗಲ, ಹರೀಶ್ ರೈ ನರ್ಲಡ್ಕ , ಶರೀಫ್ ಗುತ್ತಿಗೆ, ಬಾಲಕೃಷ್ಣ ರೈ, ಅಬ್ಬಾಸ್ ಉಳ್ಳಾಲಾಡಿ , ಸುಲೈಮಾನ್ ಪ್ರಗತಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ 32 ವರ್ಷ ನರ್ಲಡ್ಕ ಅಂಗನವಾಡಿ ಕೆಂದ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿ ಶ್ರೀಮತಿ ಯಶೋದ ಎಡಮಂಗಲ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕೆ.ಪಿ.ಎಲ್ 2025 ಚಾಂಪಿಯನ್ ತಂಡವಾಗಿ ವೈ.ಎಫ್.ಸಿ ಕರಿಂಬಿಲ ಹಾಗೂ ರನ್ನರ್ಸ್ ಆಗಿ ಸಹಾರ ಎಣ್ಮೂರು ಮೂಡಿ ಬಂದಿದೆ.




m
