ಪ್ರಥಮ:- ಉಮ್ಮರ್ ಮತ್ತು ಸಿರಾಜ್ ತಂಡ, ದ್ವಿತೀಯ:- ಉಸ್ಮಾನ್ ಮತ್ತು ರಿಯಾಝ್ ತಂಡ, ತೃತೀಯ:- ನಾಸ್ಫಾನ್ ಮತ್ತು ರಾಹಿಝ್ ತಂಡ
ಕೊಯನಾಡು: ಜ.26, ಇಲ್ಲಿನ ಕೊಯನಾಡು ಫ್ರೆಂಡ್ಸ್ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕರಾವಳಿ ಹೋಟೆಲ್ ಬಳಿಯ ಮೈದಾನದಲ್ಲಿ ನಡೆಯಿತು.
ಜ .25 ಸಂಜೆ 7 ಗಂಟೆಯಿಂದ ಆರಂಭಗೊಂಡ ಪಂದ್ಯಾವಳಿ ತಡ ರಾತ್ರಿ ಸುಮಾರು 1 ಗಂಟೆಯವರೆಗೂ ನಡೆಯಿತು. 12 ತಂಡಗಳ ಮಧ್ಯೆ ಡಬಲ್ಸ್ ಪಂದ್ಯಾಟ ನಡೆದಿದ್ದು. ಅತ್ಯಂತ ಪೈಪೋಟಿಯಿಂದ ಸ್ಪರ್ದೆ ಏರ್ಪಟ್ಟಿತ್ತು. ಪಂದ್ಯಾಟದಲ್ಲಿ ಕೊಯನಾಡು, ಸಂಪಾಜೆ, ಕಲ್ಲುಗುಂಡಿ ಭಾಗದ ಆಟಗಾರರು ಭಾಗವಹಿಸಿದ್ದರು.
ಪ್ರಥಮ:- ಉಮ್ಮರ್ ಮತ್ತು ಸಿರಾಜ್ ತಂಡ ದವರಿಗೆ ಟ್ರೋಫಿಯನ್ನು ಯುವ ನಾಯಕರಾದ ಹನೀಫ್ ಎಸ್ ಪಿ ಹಾಗೂ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ ಹಸ್ತಾಂತರಿಸಿದರು, ದ್ವಿತೀಯ:- ಉಸ್ಮಾನ್ ಮತ್ತು ರಿಯಾಝ್ ತಂಡ ದವರಿಗೆ ಟ್ರೋಫಿಯನ್ನು ಯುಎಇ ಸಮಿತಿ ನಾಯಕರಾದ ರಹಮತ್ ಮತ್ತು ಕರಾವಳಿ ಮಾಲಿಕರಾದ ಶಾಫಿ ರವರು ಹಸ್ತಾಂತರಿಸಿದರು, ತೃತೀಯ:- ನಾಸ್ಫಾನ್ ಮತ್ತು ರಾಹಿಝ್ ತಂಡ ದವರಿಗೆ ಟ್ರೋಫಿಯನ್ನು ನಝೀರ್ ಮಾಡಶೇರಿ,ಕುಂಞಿಲಿ ಹಾಗೂ ಸೈದಲವಿ ಹಸ್ತಾಂತರಿಸಿದರು.






m
