ಭಾರತ ಪ್ರಜಾಪ್ರಭುತ್ವ ದೇಶ, ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ದೇಶ, 1950 ಜನವರಿ 26 ರಂದು ಈ ಭವ್ಯ ರಾಷ್ಟ್ರ ತನ್ನ 2 ವರ್ಷ 11 ತಿಂಗಳು 17 ದಿನದ ಡಾ. ಬಿ. ಆರ್. ಅಂಬೇಡ್ಕರ್ ರವರ ನೇತೃತ್ವದ ಸಮಿತಿಯ ಅವಿರತ ಕನಿಷ್ಠವಾದ ಫಲವಾಗಿ ನ್ಯಾಯ ಸಹೋದರತ್ವ ಸಮಾನತೆ ಪ್ರಜಾಪ್ರಭುತ್ವ ಎಂಬಿತ್ಯಾದಿ ತತ್ವಗಳನ್ನು, ನೀತಿಗಳನ್ನು ಎತ್ತಿಹಿಡಿದು ಸಂವಿಧಾನವನ್ನು ಅಂಗೀಕರಿಸಿತು. ಈ ಸುದಿನಕ್ಕೆಂದು 75ರ ಸಂಭ್ರಮ, ದೇಶದೆಲ್ಲೆಡೆ ಸಂಭ್ರಮಾಚರಣೆಯಿಂದ ನಡೆಯುವಾಗ ಇದು ಒಂದು ದಿನದ ಸಡಗರವಾಗಿರದೆ ಫ್ಯಾಸಿಸ್ಟ್ ಶಕ್ತಿಗಳ ಮುಖಾಂತರ ದೇಶದ ಶಾಂತಿಯನ್ನು ಕಬಲಿಸುವ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿರುವಾಗ ದೇಶದ ಐಕ್ಯತೆಯನ್ನು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೊನೆಯುಸಿರಿನ ವರೆಗೂ ಕಾರ್ಯಾಚರಿಸುವ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೇ ತೊರೆದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಮರೆಯದೆ, ಜಾತಿ ಮತ ಪಂಥ ಭೇದವಿಲ್ಲದೆ We The People of India ಎಂಬ ಸಂವಿಧಾನ ಪೀಠಿಕೆಗೆ ಪ್ರಾಸವಾಗಿ ವಸುದೈವ ಕುಟುಂಬಕಂ ಎಂಬ ಗೀತವಾನಿಗೆ ಅನ್ವರ್ಥ ರೂಪವಾಗಿ ನಾನು ನನ್ನದು ಎಂಬ ಅಹಂಭಾವ ನೀಗಿಸಿ ನಾವು ನಮ್ಮವರು ಎಂಬ ಆಶಯಕ್ಕೆ ಅನಿಯಾಗಿ ರಾಷ್ಟ್ರದ ಸದೃಢತೆಗೆ ಅಭಿವೃದ್ಧಿಗೆ ಶ್ರಮಿಸುವವರಾಗೋಣ ಎಂದು ಹಾರೈಸುತ್ತ ದೇಶದ 76 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಬರಹ-ಮಹಮ್ಮದ್ ರಾಝಿಕ್ ಮಾಲಾಡಿ.




m
