ಕೊಯನಾಡು:- ಜನವರಿ 26 ರಂದು ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳ ಸಂತೆ, ಮುಂದಿನ ಜೀವನದಲ್ಲಿ ವ್ಯವಹಾರ ಹಾಗೂ ಕೌಶಲ್ಯ ತರಬೇತಿ ಪಡೆಯಲು ಮಕ್ಕಳಿಂದಲೇ ವ್ಯಾಪಾರ ವಹಿವಾಟು ನಡೆಸಿ ಬದುಕಿನಲ್ಲಿ ವಿಜಯ ಗಳಿಸಲು ಮಕ್ಕಳ ಸಂತೆ ಎಂಬ ಕಾರ್ಯಕ್ರಮವನ್ನು ನಡೆಸಿ ಲಾಭ ನಷ್ಟದ ಮಹತ್ವವನ್ನೂ ಮಕ್ಕಳಿಗೆ ತಿಳಿಸಿ ಸಾರ್ವಜನಿಕರೊಂದಿಗೆ ಮುಂದಿನ ಜೀವನದಲ್ಲಿ ಹೇಗೆ ವ್ಯವಹರಿಸಬೇಕು, ವ್ಯಾಪಾರ ವಹಿವಾಟನ್ನು ನಡೆಸಿ ಮುಂದಿನ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುವುದೇ ಮಕ್ಕಳ ಸಂತೆಯ ಉದ್ದೇಶ, ವ್ಯವಹಾರ ಮಾಡುವ ಮಕ್ಕಳ ಮುಖವನ್ನು ನೋಡಿದಾಗ ಅಲ್ಲಿರುವ ಆಸಕ್ತಿ, ಕುತೂಹಲ ವಿವರಿಸಲು ಅಸಾಧ್ಯ, ಇದೇ ಇಂದು ಕೊಯನಾಡು ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯ ವಿಹಂಗಮ ನೋಟ.






m
