ಮಂಗಳೂರು, ಜ 31: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಅವ್ಯವಸ್ಥೆಯ ವಿರುದ್ಧ ಕೈಕಂಬದಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರ ನೇತೃತ್ವದಲ್ಲಿ ನಡೆಯಿತು.
ಕೈಕಂಬ ಜಂಕ್ಷನ್‌ನಲ್ಲಿ ಎಸ್‌ಡಿಪಿಐ ಧ್ವಜವನ್ನು ಅನ್ವರ್ ಸಾದತ್ ಬಜತ್ತೂರುರವರು ಜಿಲ್ಲಾ ಉಪಾಧ್ಯಕ್ಷರೂ,ಕಾರ್ಯಕ್ರಮದ ಉಸ್ತುವಾರಿಯೂ ಆದ ಮೂನಿಶ್ ಅಲಿಯವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರು ಮಾತನಾಡಿ ‘ಆಡಳಿತ ಸರ್ಕಾರವು ಜನರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿದೆ. ಜನರಿಗೆ ಸುಗಮ ಸಂಚಾರಕ್ಕೆ ಸಮರ್ಪಕವಾದ ರಸ್ತೆಯನ್ನು ಮಾಡದೆ ಜನರನ್ನು ಲೂಟುವ ಟೋಲ್ ಗೇಟ್ ಮಾಡಿ ಕಳೆದ ಹನ್ನೆರಡು ವರ್ಷಗಳಿಂದ ವಸೂಲಿ ನಡೆಯುತ್ತಿದೆ. ಟೋಲ್ ಮೊತ್ತವು ಹೆಚ್ಚಾಗುತ್ತಿರುವಾಗ ಕನಿಷ್ಠ ಮೂಲ ಸೌಕರ್ಯಗಳನ್ನು ಸಹ ಒದಗಿಸದೆ ಉತ್ತರ ಭಾರತೀಯ ಹಿಂದಿ ಭಾಷಿಕ ಗೂಂಡಾಗಳನ್ನು ಇರಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ.ಇಂತಹ ಅವ್ಯವಸ್ಥೆಯಿಂದ, ಅವೈಜ್ಞಾನಿಕತೆಯಿಂದ ಕೂಡಿರುವ ಈ ಟೋಲ್‌ಗೇಟನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನತೆಯನ್ನು ಪಕ್ಷಾತೀತವಾಗಿ ಸೇರಿಸಿ ಹೋರಾಡಲು ಎಸ್‌ಡಿಪಿಐ ಸಿದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ .ಕೆ ರವರು ಮಾತನಾಡಿ ‘ಅವೈಜ್ಞಾನಿಕ, ಅಸಮರ್ಪಕವಾದ ಟೋಲ್ ಗೇಟ್ ಮಾಡಿ ಜನರನ್ನು ದಬ್ಬಾಳಿಕೆಯ ಮೂಲಕ ಲೂಟುವ ಉದ್ದೇಶ ನಿಮ್ಮದಾದರೆ ಅದಕ್ಕೆ ಅವಕಾಶವನ್ನು ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ ಮಾತನಾಡಿ’ ಈ ಟೋಲ್ ಗೇಟ್ ಕೆಲವು ಬಂಡವಾಳಶಾಹಿಗಳಿಗೆ, ರಾಜಕಾರಣಿಗಳಿಗೆ ವ್ಯಾಪಾರ ಕೇಂದ್ರವಾಗಿದೆ ಹೊರತು ಜನೋಪಕಾರಕ್ಕಿರುವುದಲ್ಲ. ಇದು ಒಂದು ಸುಲಿಗೆಯ ದಂಧೆಯ ಕೇಂದ್ರವೂ ಆಗಿದೆ’ ಎಂದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ ‘ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ ಮತ್ತೊಮ್ಮೆ ಟೋಲ್ ವಸೂಲಿಗೆ ಇಳಿದರೆ ಈ ಟೋಲ್ ಗೇಟ್ ನೆಲಸಮ ಮಾಡುತ್ತೇವೆ’ ಎಂಬ ಎಚ್ಚರಿಕೆಯನ್ನು ನೀಡಿದರು.
ಕೈಕಂಬ ಜಂಕ್ಷನ್‌ನಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆಯಲ್ಲಿ ಅವೈಜ್ಞಾನಿಕ, ಅಸಮರ್ಪಕ ಟೋಲ್ ಗೇಟ್ ವಿರುದ್ಧ ಘೋಷಣೆ ಕೂಗಿ ಜನಸಾಮಾನ್ಯರು ಹಾಗೂ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಹಿದಾ ತಸ್ನೀಂ (ಉಪಾಧ್ಯಕ್ಷರು ಎಸ್ ಡಿ ಪಿ ಐ ಕರ್ನಾಟಕ )ಸಿದ್ದೀಕ್ ಪುತ್ತೂರು,(ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳೂರು ಗ್ರಾಮಾಂತರ),ಸಿದ್ದೀಕ್ ಅಲೆಕ್ಕಾಡಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳೂರು ಗ್ರಾಮಾಂತರ), ಅಶ್ರಫ್ ತಲಪಾಡಿ (ಜಿಲ್ಲಾ ಕಾರ್ಯದರ್ಶಿ ಮಂಗಳೂರು ಗ್ರಾಮಾಂತರ), ಶಾಕಿರ್ ಅಳಕೆಮಜಲು (ಜಿಲ್ಲಾ ಕಾರ್ಯದರ್ಶಿ ಮಂಗಳೂರು ಗ್ರಾಮಾಂತರ), ನೌರೀನ್ ಆಲಂಪಾಡಿ (ಜಿಲ್ಲಾಧ್ಯಕ್ಷರು ವಿಮ್ ಮಂಗಳೂರು ಗ್ರಾಮಾಂತರ), ಝಾಹಿದಾ ಸಾಗರ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮ್ ಮಂಗಳೂರು ಗ್ರಾಮಾಂತರ), ರಹೀಮ್ ಇಂಜಿನಿಯರ್ (ಜಿಲ್ಲಾ ಕೋಶಾಧಿಕಾರಿ ಮಂಗಳೂರು ಗ್ರಾಮಾಂತರ), ಮೂಸಬ್ಬ ತುಂಬೆ (ಜಿಲ್ಲಾ ಕೋಶಾಧಿಕಾರಿ ಮಂಗಳೂರು ನಗರ), ಝಹನ ಅಕ್ಕರಂಗಡಿ (ಜಿಲ್ಲಾ ಉಪಾಧ್ಯಕ್ಷೆ ವಿಮ್ ಮಂಗಳೂರು ಗ್ರಾಮಾಂತರ), ಶಮೀರ್ ಪರ್ಲಿಯಾ (ಪ್ರಧಾನ ಕಾರ್ಯದರ್ಶಿ ಲಾರಿ ಚಾಲಕ ಮಾಲಕರ ಸಂಘ ದಕ್ಷಿಣ ಕನ್ನಡ), ಇಬ್ರಾಹಿಂ ಬಾಂಬಿಲ (ಸದಸ್ಯರು ಲಾರಿ ಚಾಲಕ ಮಾಲಕ ಸಂಘ ದ .ಕನ್ನಡ), ಅಬ್ದುಲ್ ಅಝೀಝ್ (ಅಧ್ಯಕ್ಷರು ಟ್ಯಾಕ್ಸಿ ಕಾರು ಚಾಲಕ ಮಾಲಕರ ಸಂಘ ದ. ಕನ್ನಡ), ಇಸ್ಮಾಯಿಲ್ (ಅಧ್ಯಕ್ಷರು ಮಂಗಳೂರು ಗ್ರಾಮಾಂತರ ರಿಕ್ಷಾ ಚಾಲಕ ಮಾಲಕರ ಸಂಘ), ಅಕ್ಬರ್ ಬೆಳ್ತಂಗಡಿ (ಅಧ್ಯಕ್ಷರು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ), ಅಶ್ರಫ್ ಬಾವು (ಅಧ್ಯಕ್ಷರು ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ), ಅಕ್ಬರ್ ಅಲಿ ಪೊನ್ನೋಡಿ (ಕಾರ್ಯದರ್ಶಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರಸಮಿತಿ), ರಫೀಕ್ ಎಂಎಸ್ (ಕಾರ್ಯದರ್ಶಿ ಎಸ್‍ಡಿಪಿ ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ), ಶರೀಫ್ ವಳವೂರು (ಅಧ್ಯಕ್ಷರು ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ), ಇರ್ಫಾನ್ ತುಂಬೆ (ಅಧ್ಯಕ್ಷರು ಎಸ್ ಡಿ ಪಿ ಐ ಪರಂಗಿಪೇಟೆ ಬ್ಲಾಕ್ ಸಮಿತಿ ಮತ್ತು ಕಾರ್ಯಕರ್ತರು,ಹಿತೈಷಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಯ ಬೇಡಿಕೆಯನ್ನು ಮನವಿಯ ರೂಪದಲ್ಲಿ ಸಂಬಂಧಪಟ್ಟ ಅಧಿಕಾರಿಗೆ ನೀಡಲಾಯಿತು. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.






m
