Featured, ಸ್ಥಳೀಯ

ನೆಲಮಂಗಲ ಸಮೀಪ ನೆಲ್ಯಾಡಿಯ ಉದ್ಯಮಿಯ ದರೋಡೆ ಪ್ರಕರಣ,ಸಂತ್ರಸ್ತರ ಪರ ನಿಂತು ಕೇಸು ದಾಖಲಾಗುವಂತೆ ಮಾಡಿದ SDPI

ನೆಲಮಂಗಲ ಸಮೀಪ ನೆಲ್ಯಾಡಿಯ ಉದ್ಯಮಿಯ ದರೋಡೆ ಪ್ರಕರಣ,ಸಂತ್ರಸ್ತರ ಪರ ನಿಂತು ಕೇಸು ದಾಖಲಾಗುವಂತೆ ಮಾಡಿದ SDPI

ನೆಲ್ಯಾಡಿ: ಕೋಲ್ಪೆಯ ಯುವ ಉದ್ಯಮಿ,ಸಮಾಜ ಸೇವಕ ಮತ್ತು ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಮುಹಮ್ಮದ್ ಇಕ್ಬಾಲ್ ಎಂಬವರು ವ್ಯವಹಾರ ನಿಮಿತ್ತ ಇತ್ತೀಚಿಗೆ ಬೆಂಗಳೂರಿಗೆ ತೆರಳಿದ್ದರು,ಅಲ್ಲಿ ಅವರ ಬಿಸಿನೆಸ್ ಪಾಲುದಾರರ ಜತೆ ಮೀಟಿಂಗ್ ನಡೆಸಿ ತನ್ನ ಊರಿಗೆ ಹಿಂದಿರುಗುವಾಗ ನೆಲಮಂಗಲ ಎಂಬಲ್ಲಿ ಮೂರು ಕಾರುಗಳಲ್ಲಿ ಬಂದ ದರೋಡೆ ಗ್ಯಾಂಗ್ ಇಕ್ಬಾಲ್ ರವರ ಕಾರನ್ನು ಅಡ್ಡಗಟ್ಟಿ, ಅವರನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕೂಡಿ ಹಾಕಿದ್ದರು,ಇಕ್ಬಾಲ್ ರವರ ಕೈಯಲ್ಲಿದ್ದ ಒಂದು ಲಕ್ಷ ಎಂಬತ್ತ ಮೂರು ಸಾವಿರ ಹಣ,ಬಲೆನೋ ಕಾರು ಹಾಗೂ ಮೊಬೈಲನ್ನು ದರೋಡೆ ಕೋರರು ವಶಪಡಿಸಿಕೊಂಡಿದ್ದಲ್ಲದೇ ಎರಡು ದಿನ ನೆಲಮಂಗಲ ಹಾಗು ಒಂದು ದಿನ ಸಕಲೇಶಪುರ ಸಮೀಪದ ರೆಸಾರ್ಟ್ ಒಂದರಲ್ಲಿ ಕೂಡಿ ಹಾಕಿ ದೈಹಿಕ ಚಿತ್ರ ಹಿಂಸೆ ನೀಡುವುದರ ಜೊತೆಗೆ,ಅಮಲು ಪದಾರ್ಥವನ್ನು ಕೂಡ ಬಲವಂತವಾಗಿ ಸೇವಿಸುವಂತೆ ಮಾಡಿದ್ದರು. ದಿನಕ್ಕೆ ಐದು ಲಕ್ಷದಂತೆ ಮೂರು ದಿನಗಳಲ್ಲಿ ಹದಿನೈದು ಲಕ್ಷ ಉದ್ಯಮಿಯ ಖಾತೆಯಿಂದ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿದ ದುಷ್ಕರ್ಮಿಗಳ ತಂಡ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಇಕ್ಬಾಲ್ ರವರ ಮೂಲಕ ಅವರ ತಮ್ಮ ರಫೀಕ್ ರವರಿಗೆ ದೂರವಾಣಿ ಕರೆ ಮಾಡಿಸಿ 13 ಲಕ್ಷ ಹಣವನ್ನು ತರಿಸಿಕೊಂಡರು. ಹಣವನ್ನು ಪಡೆದ ನಂತರ ರಫೀಕ್ ರವರ ಜತೆ ಇಕ್ಬಾಲ್ ರನ್ನು ಬಿಟ್ಟು ಕಳುಹಿಸಿರುತ್ತಾರೆ.ಈ ವಿಷಯವನ್ನು ಯಾರಿಗಾದರೂ ತಿಳಿಸಿದಲ್ಲಿ ಅಥವಾ ಕಾನೂನು ಹೋರಾಟಕ್ಕೆ ಮುಂದಾದಲ್ಲಿ ಇಬ್ಬರನ್ನು ಕೊಲ್ಲುವುದಾಗಿ ದರೋಡೆಕೋರರು ಬೆದರಿಕೆ ಕೂಡ ಹಾಕಿದ್ದರು.

*ಎಸ್ಡಿಪಿಐ ಎಂಟ್ರಿ*

ದರೋಡೆಕೋರರ ಗುಂಪಿನಿಂದ ಬಿಡುಗಡೆಗೊಂಡು ಮನೆಗೆ ಬಂದ ಇಕ್ಬಾಲ್ ರವರ ಮನೆಗೆ ವಿಷಯ ತಿಳಿದ ಸ್ಥಳೀಯ ಎಸ್ಡಿಪಿಐ ನಾಯಕರು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಕಾನೂನು ಕ್ರಮಕ್ಕೆ ಮುಂದಾಗಲು ಇಕ್ಬಾಲ್ ರವರಿಗೆ ಸಲಹೆ ಮತ್ತು ನೈತಿಕ ಬೆಂಬಲ ನೀಡಿದರು. ನಿರಂತರ ಹಿಂಸೆ ಮತ್ತು ಬೆದರಿಕೆಯಿಂದ ಸಂಪೂರ್ಣ ಭಯಭೀತ ಗೊಂಡಿದ್ದ ಇಕ್ಬಾಲ್ ರವರು ಕೇಸು ದಾಖಲಿಸಲು ಪ್ರಾರಂಭದಲ್ಲಿ ಒಪ್ಪಿರಲಿಲ್ಲ. ಕೊನೆಗೆ ಸ್ಥಳೀಯ ಎಸ್ಡಿಪಿಐ ನಾಯಕರು ಇಕ್ಬಾಲ್ ರವರ ಮನವೊಲಿಸಿ,ಧೈರ್ಯ ತುಂಬಿದರು. ಬಳಿಕ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ರವರಿಗೆ ಘಟನೆಯ ವಿಚಾರವನ್ನು ತಿಳಿಸಿದರು, ತಕ್ಷಣ ಅನ್ವರ್ ಸಾದತ್ ರವರು ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ರವರಿಗೆ ವಿಷಯವನ್ನು ತಿಳಿಸಿ ಸಹಕಾರ ಕೋರಿದರು , ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಎಸ್ಪಿ ಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರಿಗೆ ವಿಚಾರ ತಿಳಿಸಿದರು, ಅದಾಗಲೇ ನೆಲ್ಯಾಡಿಯ SDPI ಮುಖಂಡರು ಸಂತ್ರಸ್ತ ಇಕ್ಬಲ್ ರವರನ್ನು ಕರೆದುಕೊಂಡು ನೆಲಮಂಗಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ FIR ದಾಖಲಾಯಿತು. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಕೂಡ ನೀಡಿರುತ್ತಾರೆ. ನೆಲ್ಯಾಡಿಯ SDPI ನಾಯಕರ ಈ ಸಮಯೋಚಿತ ನಡೆಯು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

🔷ಬಜೆಟ್ ನಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?

🔷ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ ಅವರನ್ನು ಭೇಟಿಯಾದ ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ

🔷ಮೊಬೈಲ್ ಕಳೆದುಹೋಗಿದೆ : ಸಿಕ್ಕಿದವರು ಮರಳಿಸಿ

🔷ಸುಳ್ಯ : ಗಾರ್ಡ್ ಶೆಡ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!

🔷ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ

🔷ಅಡಿಂಜ ಕಿರು ಸೇತುವೆ ರಚನೆಯ ಗುದ್ದಲಿಪೂಜೆ

🔷ಪೇರಡ್ಕ ಉರೂಸ್:- ಧಾರ್ಮಿಕ ಉಪನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ

🔷KSRTC ಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆ

🔷ಭಾರತಾಂಬೆಯ ವೀರ ಪುತ್ರರು…

m