ಸಂಪಾಜೆ ಗ್ರಾಮದ ಕೊಯನಾಡು ಪ್ರಾಥಮಿಕ ಶಾಲೆಗೆ ನೂತನ ಸ್ಥಳ ಗುರುತಿಸಲು ಮಾನ್ಯ ವಿರಾಜಪೇಟೆ ಜನಪ್ರಿಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ಸೂಚನೆ ಮೇರೆಗೆ ಕಂದಾಯ ಇಲಾಖೆ ಅತೀ ಶೀಘ್ರದಲ್ಲಿ ಶಾಲೆಯ ಹೆಸರಿನಲ್ಲಿ ಸ.ನ :69/1 ರ 1 ಎಕ್ರೆ ಜಾಗ ಮಂಜೂರು ಮಾಡಿರುತ್ತಾರೆ.ಇದಕ್ಕೆ ಸಂಪೂರ್ಣ ಸಹಕಾರ ಮಾನ್ಯ ಶಾಸಕರಿಗೆ ಶಾಲಾ ಎಸ್ಡಿಎಂಸಿ ಹಾಗು ಹಿರಿಯ ವಿದ್ಯಾರ್ಥಿಗಳಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪುರುಷೋತ್ತಮ, ಹಿರಿಯ ವಿದ್ಯಾರ್ಥಿ ಅಧ್ಯಕ್ಷ ಹನೀಫ್ ಎಸ್ ಪಿ, ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಪಿ ಎಲ್,ಸಾಮಾಜಿಕ ಕಾರ್ಯಕರ್ತ ಅಪ್ಪಣ್ಣ ಟಿ ಸಿ, ಸದಸ್ಯರುಗಳಾದ ಉಮೇಶ್, ಲೋಕೇಶ್, ನಸೀರ್, ಶಫೀರ್,ಜುಹೈಲ್ ಹಾಜರಿದ್ದರು.





m
