1926 ರಲ್ಲಿ ಸ್ಥಾಪಿಸಲ್ಪಟ್ಟ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 2026ಕ್ಕೆ ನೂರು ವರ್ಷಗಳನ್ನು ಪೂರೈಸುತ್ತಿದೆ. ನೂರನೇ ವಾರ್ಷಿಕ ಮಹಾಸಮ್ಮೇಳನವು 2026 ಫೆಬ್ರವರಿ 4 ರಿಂದ 8 ರವರೆಗೆ ಸಮೀಪದ ಕಾಸರಗೋಡು ಕುನಿಯದಲ್ಲಿ ನಡೆಯಲಿದೆ. ಇದರ ಅಂಗವಾಗಿ SKSSF ಸುಳ್ಯ ಟೌನ್ ಸಮಿತಿ 100 ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ, ರೋಗಿಗಳ ಆರೈಕೆ, ಧಾರ್ಮಿಕ ಚಟುವಟಿಕೆಗಳು, ಸಮಾಜ ಸೇವೆ ಮುಂತಾದ ನೂರು ಜನಪರ ಕಾರ್ಯಕ್ರಮಗಳನ್ನು ಸಮಸ್ತ ನೂರನೇ ವಾರ್ಷಿಕದ ಪ್ರಯುಕ್ತ ನಡೆಸಲಿದ್ದೇವೆ ಎಂದು SKSSF ಸುಳ್ಯ ಟೌನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.




m
