ಸುಳ್ಯ:- ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಹಾಗೂ ಎಸ್ ಎಸ್ ಎಫ್ ಮೊಗರ್ಪಣೆ ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣೆವು ಮಾರ್ಚ್ 9 ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು,
ಶಾಂತಿನಗರ ಮಸೀದಿ ಮುಅಲ್ಲಿಂ ಅಬ್ದುಲ್ ರಶೀದ್ ಝೈನಿ ದುಆ ನೆರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಸುಮಾರು 30 ರಷ್ಟು ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು,
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮೊಗರ್ಪಣೆ ಯೂನಿಟ್ ಅಧ್ಯಕ್ಷ ಜಿ ಕೆ ಅಬ್ದುಲ್ ರಝಾಕ್, ಎಸ್ ವೈ ಎಸ್ ಮೊಗರ್ಪಣೆ ಯೂನಿಟ್ ಅಧ್ಯಕ್ಷ ಅಬ್ದುಲ್ಲಾ, ಎಸ್ ಎಸ್ ಎಫ್ ಮೊಗರ್ಪಣೆ ಯೂನಿಟ್ ಕಾರ್ಯದರ್ಶಿ ಶಾಕಿರ್, ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಕೆ ಎ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್, ಶರೀಫ್ ಜಯನಗರ, ಸೇಮೀರ್ ಡಿ.ಎಚ್ , ರಹ್ಮಾನ್ ಮೊಗರ್ಪಣೆ,ಮುಸ್ತಫಾ ಎಂ.ಎಂ, ಆಸಿಫ್ ಜಯನಗರ, ಮುನೀರ್ ಜಯನಗರ ಹಾಗೂ ಸದಸ್ಯರು ಉಪಸ್ಥಿತರಿದ್ದರು




m
