NEW VS IND FINAL | 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ:
ದುಬೈ: ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ.
ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುದರು.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 252 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶುಭಮನ್ ಗಿಲ್ ಜಿತೆಗೂಡಿ ಇನ್ನಿಂಗ್ಸ್ ಆರಂಭಿಸಿದರು.
ಮೊದಲ 10 ಓವರ್‌ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 64 ರನ್ ಕಳೆಹಾಕಿತು. ರೋಹಿತ್ ಅದ್ಭುತವಾಗಿ ಭರ್ಜರಿ ಆರಂಭ ನೀಡಿದರೆ, ಗಿಲ್ ಶಾಂತವಾಗಿ ಇನ್ನಿಂಗ್ಸ್ ಕಟ್ಟಲು ಸಾತ್ ನೀಡಿದ್ದರು. ಭಾರತ 18 ಓವರ್‌ಗಳ ಕಾಲ ವಿಕೆಟ್ ಕಳೆದುಕೊಳ್ಳದೆ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು.
ನ್ಯೂಜಿಲೆಂಡ್ ನಾಯಕ ಸ್ಯಾಂಟ್ನರ್ ಎಸೆದ 19 ನೇ ಓವರ್‌ನಲ್ಲಿ ಗಿಲ್ ಕವರ್ ಕಡೆಗೆ ಶಾಟ್ ಪ್ರಯತ್ನಿಸಿದಾಗ, ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಹಿಡಿದು ನಿರ್ಗಮಿಸಿದರು, ಗಿಲ್ 50 ಎಸೆತಗಳಲ್ಲಿ 31 ರನ್ ಗಳಿಸಿದ್ದರು.
ಬ್ರೇಸ್‌ವೆಲ್ ಎಸೆದ ಮುಂದಿನ ಓವರ್‌ನಲ್ಲಿ ಕೊಹ್ಲಿ ಎಲ್ಬಿಡಬ್ಲ್ಯೂ ಆಗಿ ಒಂದು ರನ್‌ಗೆ ಔಟಾದರು.
ರಚಿನ್ ರವೀಂದ್ರ ಎಸೆದ 27ನೇ ಓವರ್‌ನಲ್ಲಿ ರೋಹಿತ್ ಬಿಗ್ ಶಾಟ್ ಆಡಲು ಪ್ರಯತ್ನಿಸುವಾಗ ನ್ಯೂಜಿಲೆಂಡ್ ವಿಕೆಟ್ ಕೀಪರ್ ಲ್ಯಾಥಮ್ ಸ್ಟಂಪ್ ಮಾಡಿ ಔಟ್ ಮಾಡಿದರು. ರೋಹಿತ್ 83 ಎಸೆತಗಳಲ್ಲಿ 76 ರನ್ ಗಳಿಸಿದ್ದು. ಇದರಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಒಳಗೊಂಡಿತ್ತು.
ನಂತರ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಜವಾಬ್ದಾರಿಯುತ ಆಟವಾಡಿದರು. ಇಬ್ಬರೂ 61 ರನ್‌ಗಳ ಜೊತೆಯಾಟವನ್ನು ನೀಡಿದರು.
ಸ್ಯಾಂಟ್ನರ್ ಬೌಲಿಂಗ್ ಮಾಡಲು ಹಿಂತಿರುಗಿದಾಗ, ಶ್ರೇಯಸ್ ಅವರ ವಿಕೆಟ್ ಪಡೆದರು. ಶ್ರೇಯಸ್ 62 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ 29 ರನ್ ಗಳಿಸಿ ಔಟಾದರು.
ಕೊನೆಯ 5 ಓವರ್‌ಗಳಲ್ಲಿ ಭಾರತ ಗೆಲ್ಲಲು 32 ರನ್‌ಗಳು ಬೇಕಾಗಿದ್ದಾಗ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮೈದಾನದಲ್ಲಿದ್ದರು. ಭಾರತ ಗೆಲ್ಲಲು 11 ರನ್‌ಗಳ ಅವಶ್ಯಕತೆಯಿದ್ದಾಗ, ಜೇಮಿಸನ್ ಎಸೆದ 48ನೇ ಓವರ್‌ನಲ್ಲಿ ಹಾರ್ದಿಕ್ 18 ರನ್‌ಗಳಿಗೆ ಔಟಾದರು.
ಭಾರತ ಗೆಲ್ಲಲು 12 ಎಸೆತಗಳಲ್ಲಿ 7 ರನ್ ಗಳ ಅವಶ್ಯಕತೆಯಿತ್ತು. 49ನೇ ಓವರ್‌ನಲ್ಲಿ ಭಾರತ 9 ರನ್‌ಗಳಿಂದ ವಿಜಯ ಪತಾಕೆ ಎತ್ತಿ ಹಿಡಿಯಿತು.
ರಾಹುಲ್ 33 ಎಸೆತಗಳಲ್ಲಿ 34 ರನ್ ಗಳಿಸಿದರು. ಜಡೇಜ 5 ರನ್ ಗಳಿಸಿದರು. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸರದಿಯಂತೆ ಪ್ರಾಬಲ್ಯ ಸಾಧಿಸಿದ್ದವು.




m

