ಐಪಿಎಲ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 150 ಕ್ಯಾಚ್ಗಳನ್ನು ಹಿಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ.
ಪ್ರಸ್ತುತ ಐಪಿಎಲ್ ಋತುವಿನ 22ನೇ ಲೀಗ್ ಪಂದ್ಯ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಯಿತು.
ಪಂದ್ಯದ 8ನೇ ಓವರ್ನಲ್ಲಿ ನೆಹಾಲ್ ವಾದ್ರಾ ಅವರ ವಿಕೆಟ್ , ಕೀಪರ್ ಧೋನಿ ಕ್ಯಾಚ್ ಹಿಡಿದು ಔಟ್ ಮಾಡಿದರು. ಇದರೊಂದಿಗೆ ಧೋನಿ ಐಪಿಎಲ್ ಇತಿಹಾಸದಲ್ಲಿ 150 ಕ್ಯಾಚ್ಗಳನ್ನು ಹಿಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧೋನಿಯ ನಂತರದ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ 137 ಕ್ಯಾಚ್ಗಳು ಹಿಡಿದು ಎರಡನೇ ಸ್ಥನಾದಲ್ಲಿದ್ದಾರೆ.
ವೃದ್ಧಿಮಾನ್ ಸಹಾ 87 ಕ್ಯಾಚ್, ರಿಷಭ್ ಪಂತ್ 76 ಕ್ಯಾಚ್ ಮತ್ತು ಕ್ವಿಂಟನ್ ಡಿ ಕಾಕ್ 66 ಕ್ಯಾಚ್ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.





m

