II P U RESULT | ಮಹಮ್ಮದ್ ಲಾಝಿಮ್ ಜಿ.ಎಲ್. ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ!
ಸುಳ್ಯ: ಅಮರ ಜ್ಯೋತಿ ಪ್ರೀ ಯುನಿವರ್ಸಿಟಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತಿದ್ದ ವಿದ್ಯಾರ್ಥಿ ಮಹಮ್ಮದ್ ಲಾಝಿಮ್ ಜಿ.ಎಲ್ II PU ಪರೀಕ್ಷೆಯಲ್ಲಿ 600 ರಲ್ಲಿ 588 (98%).ಅಂಕಗಳು ಪಡೆದು ಸುಳ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಲಾಝಿಮ್ ಜಿ.ಎಲ್, ಲತೀಫ್ ಜಿ. ಎಂ (ಶಿಲ್ಪ) ಮತ್ತು ಝುಬೈದಾ ಬಿ. ದಂಪತಿಗಳ ಪುತ್ರ. ಲಾಝಿಮ್ ಅವರ ಈ ಅತ್ಯುತ್ತಮ ಸಾಧನೆಗೆ , ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅತ್ಯಂತ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ನಡೆಸಿರುವ ಲಾಝಿಮ್, ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಈ ಫಲಿತಾಂಶವು ಕೆ.ವಿ.ಜಿ ಅಮರ ಜ್ಯೋತಿ ಕಾಲೇಜಿಗೂ ಹಾಗೂ ಸುಳ್ಯ ತಾಲ್ಲೂಕಿಗೂ ಕೀರ್ತಿ ತಂದಿದೆ. ಲಾಝಿಮ್ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.





m

