Featured, ಅಂಕಣ, ಕ್ರೀಡೆ

8 ವಿಕೆಟ್‌ಗಳಿಂದ ಭರ್ಜರಿ ಗೆಲುವು – ಐಪಿಎಲ್ 2025 ಫೈನಲ್ಗೆ ಆರ್ಸಿಬಿ

ಐಪಿಎಲ್ 2025 ರ ಮೊದಲ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪಂಜಾಬ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಆರ್ಸಿಬಿ 2016ರ ನಂತರ ಮೊದಲ ಬಾರಿಗೆ ಫೈನಲ್ ತಲುಪಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಹೆಜಲ್‌ವುಡ್ ಮತ್ತು ಸುಯಾಶ್ ಶರ್ಮಾ ಬೌಲಿಂಗ್‌ನಲ್ಲಿ ಮಿಂಚಿದರು – ಇಬ್ಬರೂ ತಲಾ ಮೂರು ವಿಕೆಟ್ ಪಡೆದರು, ಪಂಜಾಬ್ ಅನ್ನು ಕಡಿಮೆ ಮೊತ್ತಕ್ಕೆ ತಗ್ಗಿಸಿದರು. ಬಳಿಕ ಬ್ಯಾಟಿಂಗ್‌ಗೆ ಬಂದ ಫಿಲ್ ಸಾಲ್ಟ್ ಕೇವಲ 23 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಜಯದಿಂದಾಗಿ ಲಕ್ಷಾಂತರ ಆರ್ಸಿಬಿ ಅಭಿಮಾನರ ಕನಸು ಈಡೇರಿದ್ದು, ತಂಡದ ಭರವಸೆಯ ಪ್ರದರ್ಶನ ಫೈನಲ್‌ಗೆ ಮುನ್ನ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

m

Related Posts