Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಎಸ್ ಬಿ ಎಸ್ ಸ್ನೇಹ ಸಹವಾಸ ಏಕ ದಿನ ಶಿಬಿರ : ಮಾದಕ ವಿರುದ್ಧ ಜನಜಾಗೃತಿಯೊಂದಿಗೆ ಮದ್ರಸ ವಿದ್ಯಾರ್ಥಿಗಳು

“ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ”ಎಸ್ ಬಿ ಎಸ್ ಸ್ನೇಹ ಸಹವಾಸ ಏಕ ದಿನ ಶಿಬಿರ

ಸುಳ್ಯ ; ಜಟ್ಟಿಪಳ್ಳ

ಸುನ್ನೀ ಅಧ್ಯಾಪಕ ಒಕ್ಕೂಟ ರಾಜ್ಯ ಸಮಿತಿ ನಿರ್ಧೇಶಿಸಿದ ಮಾದಕ ದ್ರವ್ಯ ವಿರುದ್ಧದ ಅಭಿಯಾನದ ಅಂಗವಾಗಿ “ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ”ಎಸ್ ಬಿ ಎಸ್, ಸ್ನೇಹ ಸಹವಾಸ ಏಕ ದಿನ ಶಿಬಿರವು ವೈವಿಧ್ಯತೆಯೊಂದಿಗೆ ಆಕರ್ಷಣೀಯವಾಗಿ ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಇದರ ಆಶ್ರಯದಲ್ಲಿ ಬುಸ್ತಾನುಲ್ ಉಲೂಂ ಮದ್ರಸ ದಲ್ಲಿ ನಡೆಯಿತು.

 

ಗಾಂಧಿನಗರ ಮದ್ರಸ ಅಧ್ಯಾಪಕ ಇರ್ಫಾನ್ ಹಿಮಮಿ ಮಾದಕ ಸೇವನೆಯ ಅನಾಹುತಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳು ಮಾದಕ ವಿರುದ್ಧ ಕಾರ್ಯಾಚರಣೆಗಳಲ್ಲಿ ಸಕ್ರೀಯರಾಗಬೇಕೆಂದರು.

ದುಷ್ಟ ಸಹವಾಸಕ್ಕೆ ಬಲಿಯಾಗದೆ ಒಳಿತನ್ನು ಬಯಸುವವರೊಂದಿಗೆ ಸ್ನೇಹ ಸಹವಾಸ ಬೆಳಸಬೇಕೆಂದು ಸಲಹೆ ನೀಡಿದರು.
ಮತ್ತೊರ್ವ ತರಬೇತುದಾರರಾಗಿ ಆಗಮಿಸಿದ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ ಎತ್ತರಕ್ಕೆ ಹಾರೋಣವೆಂಬ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಮೋಟಿವೇಟ್ ಮಾಡಿದರು

ಶತ ಪ್ರಯತ್ನದ ಮೂಲಕ ಝೀರೋದಿಂದ ಹೀರೋ ಆಗಲಿದ್ದು ವಿದ್ಯಾರ್ಥಿ ಜೀವನ ವನ್ನು ಸದುಪಯೋಗ ಪಡಿಸಲು ಕರೆ ನೀಡಿದರು.
ಶಿಬಿರದ ಆರಂಭದಲ್ಲಿ ವಿದ್ಯಾರ್ಥಿಗಳು  ಪಿಸಿಕಲ್ ಎಕ್ಸ್ ಸೈಝ್ ನಿರ್ವಹಿಸಿ ಮಾದಕ ವಿರುದ್ಧದ ಸಂದೇಶ ಪ್ಲೇ ಕಾರ್ಡ್ ಪ್ರದರ್ಶಿಸಿ ಗಮನ ಸೆಳೆದರು.ಮುಖ್ಯೋಪಾದ್ಯಾಯ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪ್ರಾಸ್ಥಾವಿಕ ಭಾಷಣಗೈದು ವ್ಯಾಯಾಮ ಹಾಗೂ ಉತ್ತಮ ಗೆಳೆತನದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ರಸ ಪ್ರಸ್ನೆ ,ಪ್ರಬಂಧ ಸ್ಪರ್ಧೆಯ ವಿಜೇತರನ್ನು ಹಾಗೂ ಪ್ರತಿಭಾ ಪ್ರದರ್ಶನಗೈದ ವಿದ್ಯಾರ್ಥಿಗಳನ್ನು  ಅಭಿನಂದಿಸಲಾಯಿತು.
ಹಯಾತುಲ್ ಇಸ್ಲಾಂ ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎಂ,ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ,ಮೊಯಿದೀನ್,ಇಸ್ಮಾಯೀಲ್ ಮುಂತಾದವರು ಉಪಸ್ಥಿತರಿದ್ದರು.

ಎಸ್ ಬಿ ಎಸ್ ಅಧ್ಯಕ್ಷ ಮುರ್ಷಿದ್ ಅಧ್ಯಕ್ಷತೆ ವಹಿಸಿ,ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಉದ್ಘಾಟಿಸಿದರು.ವಿದ್ಯಾರ್ಥಿಗಳಾದ ಅಯಾನ್ ಖಿರಾಅತ್ ಪಠಿಸಿ,ಸಹಲ್ ಪ್ರಬಂಧ ಮಂಡಿಸಿ,ರಿಫಾಝ್ ಕ್ರಾಂತಿಗೀತೆ,ರಾಫಿ ಘೋಷ ವಾಕ್ಯ,ಸರ್ಫರಾಝ್ ಹಾಗೂ ಶಾಝ್ ಭಾಷಣಗೈದರು ಎಸ್ ಬಿ ಎಸ್ ಕಾರ್ಯದರ್ಶಿ ಅಲ್ತಾಫ್ ಸ್ವಾಗತಿಸಿದನು.

m

Related Posts