




m


ಅಮೆರಿಕದ ಅಲಬಾಮಾ ರಾಜ್ಯದ ಬರ್ಮಿಂಗ್‌ಹ್ಯಾಮ್‌ನ ಗ್ರ್ಯಾಂಡ್ ವ್ಯೂ ವೈದ್ಯಕೀಯ ಕೇಂದ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ.
ಪಮೇಲಾ ಮೈನ್ ಎಂಬ ತಾಯಿ ಸಿಸೇರಿಯನ್ ಮೂಲಕ ಜನ್ಮ ನೀಡಿದ ಮಗಳು ‘ಪ್ಯಾರಿಸ್ ಹಲೋ’ ಅಸಾಮಾನ್ಯ ತೂಕದೊಂದಿಗೆ ಜನಿಸಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ತಾಯಿ ಶಾಖ್ ಆಗಿದ್ದಾರೆ.
ಮಗುವಿನ ತೂಕ 13 ಪೌಂಡ್ (ಸುಮಾರು 6 ಕೆ.ಜಿ) ಇದ್ದು, ಇದು ಸಾಮಾನ್ಯ ಹುಟ್ಟಿದ ಮಗುವಿನ ತೂಕದ (3-3.5 ಕೆ.ಜಿ) ಗಿಂತ ದ್ವಿಗುಣಕ್ಕಿಂತ ಹೆಚ್ಚು.
ಹುಟ್ಟುವ ಮೂರು ದಿನಗಳಲ್ಲೇ ಆಸ್ಪತ್ರೆಯಲ್ಲಿ “ಫೇಮಸ್” ಆದ ಮಗುವಿನ ಜನನದ ನಾಲ್ಕು ವಾರಗಳ ಮುಂಚಿನ ಸ್ಕ್ಯಾನ್‌ನಲ್ಲಿ 8 ಪೌಂಡ್ (ಸುಮಾರು 3.6 ಕೆ.ಜಿ) ಮತ್ತು ನಂತರದ ಮೌಲ್ಯಮಾಪನದಲ್ಲಿ 10 ಪೌಂಡ್ (4.5 ಕೆ.ಜಿ) ತೂಕದ ಅಂದಾಜು ಇದ್ದರೂ, ನಿಜವಾದ ತೂಕ ಎರಡೂ ಅಂದಾಜುಗಳನ್ನು ಮೀರಿತ್ತು.
ನಿರೀಕ್ಷಿತ ದಿನಾಂಕಕ್ಕಿಂತ 16 ದಿನ ಮುಂಚಿತವಾಗಿ ಜನಿಸಿದ ಈ ಮಗುವಿನ ಅಸಾಧಾರಣ ತೂಕಕ್ಕೆ ಕಾರಣ ಅಜ್ಞಾತವಾಗಿದೆ.
ಹೆರಿಗೆ ಸಮಯದಲ್ಲಿ ನರ್ಸ್‌ರು “ಇದೇನಿದು ದೇವರೇ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರಂತೆ ಪಮೇಲಾ ತಿಳಿಸಿದ್ದಾರೆ. ವೈದ್ಯರುಗಳ ಪ್ರಕಾರ, ಸಾಮಾನ್ಯವಾಗಿ 6 ಕೆ.ಜಿ ತೂಕ ತಲುಪಲು ಮಗು ಜನಿಸಿದ ನಂತರ ಕನಿಷ್ಠ 6 ತಿಂಗಳ ವಯಸ್ಸಿನವರೆಗೆ ಬೆಳೆಯಬೇಕು. ಇದು ವಿಶ್ವದಲ್ಲೇ ಅಪರೂಪದ ಘಟನೆಯಾಗಿ ದಾಖಲಾಗಿದೆ.
ಯೂ ಟ್ಯೂಬ್ ಚಾನಲ್ subscribe ಮಾಡಿ👇
https://youtube.com/@justrelated?si=g-OkOJwYAArogbtx





m


ಯೂ ಟ್ಯೂಬ್ ಚಾನಲ್ subscribe ಮಾಡಿ👇