Featured, ಇತರೆ, ಸ್ಥಳೀಯ

ದಿವಂಗತ ಶಿವು ಮಾದಪ್ಪ ರವರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಶಿವು ಮಾದಪ್ಪ ರವರ ವ್ಯಕ್ತಿತ್ವವನ್ನು ಮಾಜಿ ಸಿಎಂ ದಿವಂಗತ ಗುಂಡುರಾವ್ ವ್ಯಕ್ತಿತ್ವಕ್ಕೆ ಹೋಲಿಕೆ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರಿಂದ ಶಿವು ಮಾದಪ್ಪ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮಡಿಕೇರಿ:- ನೆನ್ನೆ ನಮ್ಮನ್ನಗಲಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ ರವರಿಗೆ ಶ್ರದ್ಧಾಂಜಲಿ ಸಭೆಯನ್ನು, ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಮಡಿಕೇರಿಯಲ್ಲಿ ಏರ್ಪಡಿಸಲಾಗಿತ್ತು.

   ಈ ಸಭೆಯಲ್ಲಿ ಮುಖಂಡರುಗಳು ದಿವಂಗತ ಶಿವು ಮಾದಪ್ಪರವರಿಗೆ ನುಡಿ ನಮನ ಸಲ್ಲಿಸಿದರು.

  ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರು ಶಿವು ಮಾದಪ್ಪರವರ ವ್ಯಕ್ತಿತ್ವವನ್ನು ಮಾಜಿ ಮುಖ್ಯಮಂತ್ರಿ ಗುಂಡೂರಾವ್ ರವರಿಗೆ ಹೋಲಿಕೆ ಮಾಡಿದರು. ದಿವಂಗತ ಗುಂಡು ರಾವ್ ರಂತೆಯೇ ಶಿವು ಮಾದಪ್ಪರವರದ್ದು ಸ್ನೇಹ ನಡೆ ಹಾಗು ವರ್ಣರಂಜಿತ ವ್ಯಕ್ತಿತ್ವ ಮಾತ್ರವಲ್ಲ ಅವರ ಗಂಭೀರ ವ್ಯಕ್ತಿತ್ವ ಎಲ್ಲರಿಗೂ ಅಚ್ಚುಮೆಚ್ಚು ಎಂದು ಬಣ್ಣಿಸಿದರು. ಭಗವಂತ ಅವರ ವಿಷಯದಲ್ಲಿ ಕರುಣೆ ತೋರಿಸಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರು. ಬಳಿಕ ಮುಂದುವರೆದು ಶಿವು ರವರು ಪಕ್ಷಕ್ಕಾಗಿ ದುಡಿದ ಹಾಗೂ ಕೈಗೊಂಡ ಹಲವಾರು ಉತ್ತಮ ನಿರ್ಧಾರಗಳ ಬಗ್ಗೆ ಸ್ಮರಿಸಿದರು.

   ನುಡಿನಮನ ಸಲ್ಲಿಸಿದವರಲ್ಲಿ ಡಿಸಿಸಿ ಉಪಾಧ್ಯಕ್ಷರಾದ ಸುಜು ತಿಮ್ಮಯ್ಯ, ಡಿಸಿಸಿ ಪ್ರ. ಕಾರ್ಯದರ್ಶಿ ಕೊಲ್ಯದ ಗಿರೀಶ್, RGPRS ಸಂಚಾಲಕ ತನ್ನಿರ ಮೈನಾ, ಮುಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷರಾದ ಹನೀಫ್, ಬಗೈರ್ ಹುಕುಂ ಮಡಿಕೇರಿ ಅಧ್ಯಕ್ಷರಾದ ನೆರವಂಡ ಉಮೇಶ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಕೆಪಿಸಿಸಿ ಸದಸ್ಯರಾದ ರಮಾನಾಥ್ ಬೇಕಲ್, ಕುಶಾಲನಗರ ಬಗೈರ್ ಹುಕುಂ ಅಧ್ಯಕ್ಷರಾದ ವಿ.ಪಿ ಶಶಿಧರ್ ಮತ್ತಿತರರು ಪ್ರಮುಖರು.

  ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ/ಸೆಲ್ ಅಧ್ಯಕ್ಷರುಗಳು, ಡಿಸಿಸಿ ಪದಾಧಿಕಾರಿಗಳು, ಸರಕಾರಿ ನಾಮನಿರ್ದೇಶಿತ ಅಧ್ಯಕ್ಷರುಗಳು ಹಾಗು ಸದಸ್ಯರುಗಳು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

m