ಶಿಲ್ಲಾಂಗ್: ಫಿಫಾ ಫ್ರೆಂಡ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾರತ ತಂಡ ಮಾಲ್ಡೀವ್ಸ್ ತಂಡವನ್ನು 3-0 ಅಂತರದಿಂದ ಸೋಲಿಸಿದೆ.
ಇದರೊಂದಿಗೆ 15 ತಿಂಗಳಿನಿಂದ ಗೆಲುವಿನ ಮುಖ ಕಾಣದೆ ಸಂಕಷ್ಟದಲ್ಲಿದ್ದ ಭಾರತ ಫುಟ್ಬಾಲ್ ತಂಡ ಇದೀಗ ಸೋಲಿನ ಓಟಕ್ಕೆ ಅಂತ್ಯ ಹಾಡಿದೆ.
ಈ ಪಂದ್ಯವು ಬುಧವಾರ ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿತ್ತು. ನಿವೃತ್ತಿ ಘೋಷಿಸಿದ್ದ ಸುನಿಲ್ ಛೆಟ್ರಿ ಈ ಪಂದ್ಯದಲ್ಲಿ ಆಡಿದ್ದರು.
ಚೆಟ್ರಿ ಸುಮಾರು 286 ದಿನಗಳ ನಂತರ ಅಂತರರಾಷ್ಟ್ರೀಯ ಫುಟ್ಬಾಲ್ ಮೈದಾನಕ್ಕೆ ಇಳಿದಿರುವುದು ಗಮನಾರ್ಹ.
ಭಾರತದ ಪರ ರಾಹುಲ್ ಬೆಗ್ಗೆ (34ನೇ ನಿಮಿಷ) ಮತ್ತು ಲಿಸ್ಟನ್ ಕೊಲಾಕೊ (66ನೇ ನಿಮಿಷ) ಗೋಲು ಗಳಿಸಿದರು. 76ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಮುಂದಿನ ಗೋಲು ಸಿಡಿಸಿದರು. ಇದು ಸುನಿಲ್ ಚೆಟ್ರಿ ಅವರ 95ನೇ ಅಂತರರಾಷ್ಟ್ರೀಯ ಗೋಲು ಎಂಬುದು ಗಮನಾರ್ಹ.
ಇದು ಭಾರತ ತಂಡದ ಕೋಚ್, ಸ್ಪೇನ್‌ನ ಮನೋಲೋ ಮಾರ್ಕ್ವೆಜ್ ಅವರಿಗೆ ಮೊದಲ ಗೆಲುವು ಕೂಡ ಆಗಿತ್ತು.
ಭಾರತ 25 ರಂದು 2027 ರ ಏಷ್ಯಾ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.





m
