Featured, ಅಂಕಣ, ರಾಜ್ಯ

“ಔರಂಗಜೇಬ್ ವಿಷಯ ಇಂದಿನ ದಿನಕ್ಕೆ ಪ್ರಸ್ತುತವಲ್ಲ” – ಆರ್‌ಎಸ್‌ಎಸ್ ಮುಖ್ಯಸ್ಥ ಸುನಿಲ್ ಅಂಬೇಕರ್!

ನವದೆಹಲಿ: “ಔರಂಗಜೇಬನ ಸಮಾಧಿಯ ವಿಷಯವು ಇಂದಿನ ದಿನಕ್ಕೆ ಪ್ರಸ್ತುತವಲ್ಲ” ಎಂದು ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವರ್ಷ ಅಕ್ಟೋಬರ್‌ನಲ್ಲಿ ಆರ್‌ಎಸ್‌ಎಸ್ ಸಂಘಟನೆ ತನ್ನ ನೂರನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ, ಈ ಸಂದರ್ಭವನ್ನು ಗುರುತಿಸಲು ಆರ್‌ಎಸ್‌ಎಸ್ ನಾಯಕರುಗಳು ದೇಶಾದ್ಯಂತ ಸಂಭ್ರಮಾಚರಣೆ ಸಭೆಗಳನ್ನು ನಡೆಸುತ್ತಿದ್ದಾರೆ.

ಅದರಂತೆ, ಮಾರ್ಚ್ 21 ರಿಂದ 23 ರವರೆಗೆ ಕರ್ನಾಟಕದ ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಆರ್‌ಎಸ್‌ಎಸ್ ನಾಯಕರಲ್ಲಿ ಒಬ್ಬರಾದ ಸುನಿಲ್ ಅಂಬೇಕರ್ ಅವರು ಇದಕ್ಕಾಗಿ ವ್ಯವಸ್ಥೆ ಮಾಡಲು ಬೆಂಗಳೂರಿಗೆ ಬೇಟಿ ನೀಡಿದಾಗ ವರದಿಗಾರರ ಜೊತೆ ಮಾತನಾಡುವ ಅಂಧ, ಔರಂಗಜೇಬ್ ಸಮಾಧಿ ವಿಷಯದ ಬಗ್ಗೆ ಅವರನ್ನು ಕೇಳಲಾಯಿತು ಇದಕ್ಕೆ ಉತ್ತರಿಸುತ್ತಾ, “ಯಾವುದೇ ವಿಷಯಕ್ಕೂ ಗಲಭೆಗಳು ನಮ್ಮ ಸಮಾಜಕ್ಕೆ ಒಳ್ಳೆಯದಲ್ಲ. ಔರಂಗಜೇಬ್ ಸಮಾಧಿ ವಿಷಯವು ಇಂದಿನ ಕಾಲಕ್ಕೆ ಪ್ರಸ್ತುತವಲ್ಲ” ಎಂದು ಅಭಿಪ್ರಾಯ ಹಂಚಿಕೊಂಡರು.

ಆರ್‌ಎಸ್‌ಎಸ್‌ನ ಈ ಹೇಳಿಕೆಯ ನಂತರದಲ್ಲಿ, ಬಿಜೆಪಿಯ ಮೈತ್ರಿ ಪಕ್ಷಗಳು ಕೂಡ ಈ ವಿಷಯವನ್ನು ತೀವ್ರವಾಗಿ ಖಂಡಿಸಿವೆ. ಜನತಾದಳ ಯುನೈಟೆಡ್ ಮತ್ತು ಮಹಾರಾಷ್ಟ್ರದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ನಾಯಕರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಅಮೋಲ್ ಮಿಟ್ಕರಿ, ಮಾತನಾಡಿ “ಕೆಲವರಿಗೆ ಧೈರ್ಯವಿದ್ದರೆ, ಅವರು ತಮ್ಮ ಮಕ್ಕಳೊಂದಿಗೆ ಆಯುಧ ತೆಗೆದುಕೊಂಡು ಔರಂಗಜೇಬನ ಸಮಾಧಿಯನ್ನು ಒಡೆಯಬೇಕು. ಆದರೆ ಇದು ಆಗುವುದಿಲ್ಲ. ಏಕೆಂದರೆ ಈ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಅಧ್ಯಯನ ಮಾಡಲು ಕಳುಹಿಸುತ್ತಿದ್ದಾರೆ ಮತ್ತು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರು ಮಾಡುತ್ತಿರುವುದು ಹಿಂದೂಗಳನ್ನು ಕೆರಳಿಸುವ ರಾಜಕೀಯ ಮಾತ್ರ” ಎಂದು ಹೇಳಿದರು.

ಇದೇ ವಿಷಯದ ಬಗ್ಗೆ, ಬಿಹಾರದ ಆಡಳಿತ ಪಕ್ಷ ಜೆಡಿಯು ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ ಮಾತನಾಡಿದ್ದು “ನಾವು ಔರಂಗಜೇಬನ ಆಳ್ವಿಕೆಯನ್ನು ಒಳ್ಳೆಯದೆಂದು ಪರಿಗಣಿಸುವುದಿಲ್ಲ. ಆದರೆ ಯಾರ ಸಮಾಧಿಯನ್ನೂ ಅಪವಿತ್ರಗೊಳಿಸುವುದು ನಮ್ಮ ಸಂಪ್ರದಾಯವಾಗಿರಲಿಲ್ಲ. ಅದೇ ರೀತಿ, ರಾಮಾಯಣ ಮತ್ತು ಮಹಾಭಾರತದಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ” ಎಂದು ಹೇಳಿದರು.

ಔರಂಗಜೇಬ್ ಪ್ರಕರಣ ಮತ್ತೆ ಮರುಕಳಿಸಲು ಬಾಲಿವುಡ್ ಚಿತ್ರ ‘ಛಾವಾ’ ಕಾರಣ ಎಂದು ಹೇಳಲಾಗಿದೆ. ರಾಜ್ಯ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಇದರಲ್ಲಿ ಸಮಾಜವಾದಿ ಶಾಸಕ ಅಬು ಹಶ್ಮಿ ಔರಂಗಜೇಬ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ಪರಿಣಾಮವಾಗಿ ಅವರನ್ನು ಇಡೀ ಬಜೆಟ್ ಅಧಿವೇಶನದಿಂದಲೇ ತೆಗೆದುಹಾಕಲಾಯಿತು.

ಮಾತ್ರವಲ್ಲ ಆತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಬಂಧನದ ಅಪಾಯವೂ ಕೂಡ ಇತ್ತು, ಇದರಿಂದ ತಪ್ಪಿಸಿಕೊಳ್ಳಲು ಅಬು ಹಶ್ಮಿ ಮಹಾರಾಷ್ಟ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದಾರೆ‌.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವುದನ್ನು ಬೆಂಬಲಿಸಿ ಮಾತನಾಡಿದರು.

ಅವರ ಪಕ್ಷದ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಕೂಡ ಘೋಷಿಸಿದೆ.

ಮಾರ್ಚ್ 17 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಔರಂಗಜೇಬನ ಪ್ರತಿಕೃತಿಯನ್ನು ಸುಡುವ ಬಗ್ಗೆಯೂ ವದಂತಿಗಳು ಹರಡಿದ್ದವು. ಇದು ನಾಗ್ಪುರದಲ್ಲಿ ಗಲಭೆಗೆ ಕಾರಣವಾಗಿ, ಭಯುಮ್ ಖಾನ್ ಸೇರಿದಂತೆ 64 ಜನರನ್ನು ಬಂಧಿಸಲಾಯಿತು.

 ಹೆಚ್ಚುವರಿಯಾಗಿ, ನಾಗ್ಪುರ ಪೊಲೀಸರು 50 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ವಿಎಚ್‌ಪಿ ಮತ್ತು ಬಜರಂಗದಳದ ವಿರುದ್ಧದ ದೂರಿನಲ್ಲಿ ಆ ಸಂಘಟನೆಗಳ 8 ಜನರ ಹೆಸರುಗಳೂ ಸೇರಿಕೊಂಡಿವೆ.

m

Related Posts