ಹೈಕೋರ್ಟ್ ತೀರ್ಪು – “ಪತ್ನಿಯು ಅಶ್ಲೀಲ ಚಿತ್ರ ನೋಡುವುದು, ಸ್ವಯಂ ಸುಖಾನುಭವದಲ್ಲಿ ಈಡಾಗುವುದು ತಪ್ಪಲ್ಲ”
ಮದುರೈ, ತಮಿಳುನಾಡು: ಪತ್ನಿಯು ಅಶ್ಲೀಲ ವೀಡಿಯೊಗಳನ್ನು ನೋಡುವುದು ಮತ್ತು ಸ್ವಯಂ ಸುಖಾನುಭವ ಪಡೆಯುವುದು “ಪತಿಯ ಮೇಲಿನ ಕ್ರೂರತೆ” ಅಥವಾ ವಿವಾಹವಿಚ್ಛೇದನೆಗೆ ಕಾನೂನುಬದ್ಧ ಕಾರಣವಾಗಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಕರೂರು ಜಿಲ್ಲೆಯ ಪತಿಯೊಬ್ಬ ತನ್ನ ಪತ್ನಿಯ ವಿರುದ್ಧ ವಿವಾಹ ವಿಚ್ಛೇದನಕ್ಕಾಗಿ ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪೂರ್ಣಿಮಾ ಅವರ ಪೀಠವು, “ಮಹಿಳೆಯರ ದೇಹಸ್ವಾತಂತ್ರ್ಯ, ಲೈಂಗಿಕ ಸ್ವಾಯತ್ತತೆ ಮತ್ತು ಗೋಪ್ಯತೆಯ ಹಕ್ಕುಗಳು ಸಂವಿಧಾನದಡಿಯಲ್ಲಿ ಮೂಲಭೂತವಾಗಿವೆ.
ವಿವಾಹಿತರಾಗಿದ್ದರೂ ಇವುಗಳನ್ನು ಕಡಿಮೆ ಮಾಡಲಾಗದು” ಎಂದು ತೀವ್ರ ಟೀಕೆ ಮಾಡಿದೆ.
ಪ್ರಕರಣದ ಹಿನ್ನೆಲೆ: 2018ರಲ್ಲಿ ಕರೂರಿನ ಪತಿ ಮತ್ತು ಪತ್ನಿ ಎರಡನೇ ಮದುವೆ ಮಾಡಿಕೊಂಡಿದ್ದರು. ಇಬ್ಬರೂ ಮೊದಲ ವಿವಾಹದಿಂದ ವಿಚ್ಛೇದನ ಪಡೆದಿದ್ದರು.
2020 ಡಿಸೆಂಬರ್ನಿಂದ ಇಬ್ಬರೂ ಬೇರೆಯಾಗಿ ವಾಸಿಸುತ್ತಿದ್ದರು. ಪತಿಯ ಆರೋಪಗಳ ಪ್ರಕಾರ, ಪತ್ನಿಗೆ ಲೈಂಗಿಕ ರೋಗ ಇದೆ ಎಂದು ಹೇಳಿದ್ದರೂ, ಯಾವುದೇ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗಿರಲಿಲ್ಲ. ಇದರ ಜೊತೆಗೆ, ಪತ್ನಿ ಅಶ್ಲೀಲ ವೀಡಿಯೊಗಳನ್ನು ನೋಡುತ್ತಾರೆ, ಸ್ವಯಂ ಸುಖಾನುಭವ ಪಡೆಯುತ್ತಾರೆ, ಮಾವ-ಅತ್ತೆ ಮತ್ತು ಕುಟುಂಬವನ್ನು ಗೌರವಿಸುವುದಿಲ್ಲ, ಹಣವನ್ನು ಅತಿಯಾಗಿ ಖರ್ಚು ಮಾಡುತ್ತಾರೆ ಎಂಬ ಆರೋಪಗಳನ್ನು ಮಾಡಿದ್ದರು.
ನ್ಯಾಯಾಲಯದ ವಿಶ್ಲೇಶಣೆ: “ನಿಷೇಧಿತ ವಲ್ಲದ, ಖಾಸಗಿಯಾಗಿ ಅಶ್ಲೀಲ ವೀಡಿಯೊ ನೋಡುವುದು ಕಾನೂನುಬಾಹಿರವಲ್ಲ. ಸ್ವಯಂ ಸುಖಾನುಭವವು ವೈಯಕ್ತಿಕ ಹಕ್ಕು. ಪುರುಷರು ಇದನ್ನು ಮಾಡಿದಾಗ ಸಮಾಜ ಸ್ವೀಕರಿಸಿದರೆ, ಮಹಿಳೆಯರಿಗೆ ಮಾತ್ರ ಅದನ್ನು ನಿಷೇಧಿಸಲು ಸಾಧ್ಯವಿಲ್ಲ,” ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಪತ್ನಿಯ ಲೈಂಗಿಕ ರೋಗದ ಆರೋಪವು ಮಿಥ್ಯ ಎಂದು ಹೇಳಿದ ನ್ಯಾಯಾಲಯ, “ಇದ್ದಿದ್ದರೆ, ಪತಿಗೂ ರೋಗ ತಾಗುತ್ತಿತ್ತು. ಆದರೆ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ” ಎಂದು ನೊಟ್ ಮಾಡಿದೆ.
ತೀರ್ಪಿನ ಮಹತ್ವ: “ವಿವಾಹವು ಸಾಮಾಜಿಕ ಒಪ್ಪಂದವಷ್ಟೇ ಅಲ್ಲ. ಇದು ಎರಡು ವ್ಯಕ್ತಿಗಳ ವೈಯಕ್ತಿಕ ಹಕ್ಕುಗಳ ಪರಸ್ಪರ ಗೌರವದ ಮೇಲೆ ನಿಂತಿದೆ. ಪತ್ನಿಯ ಸ್ವಾತಂತ್ರ್ಯವನ್ನು ಪತಿಯ ಆರೋಪಗಳಿಂದ ಕುಗ್ಗಿಸಲು ಸಾಧ್ಯವಿಲ್ಲ,” ಎಂದು ಹೈಕೋರ್ಟ್ ಒತ್ತಿಹೇಳಿದೆ. ಕುಟುಂಬ ನ್ಯಾಯಾಲಯದ ತೀರ್ಪನ್ನು ಊರ್ಜಿತಗೊಳಿಸುವ ಮೂಲಕ, ಈ ತೀರ್ಪು ಮಹಿಳೆಯರ ದೇಹಸ್ವಾತಂತ್ರ್ಯ ಮತ್ತು ಲೈಂಗಿಕ ಸಮಾನತೆಗೆ ನ್ಯಾಯಿಕ ಮುದ್ರೆಯನ್ನು ನೀಡಿದೆ.
https://youtube.com/@justrelated?si=tby3zPy2Hnu64Jmb




m

