ಬೆಳ್ತಂಗಡಿ (ಮಾ-28): ಶಿಕ್ಷಣದ ಹಕ್ಕು ಸಂವಿಧಾನ ಖಾತರಿ ಪಡಿಸಿದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಪದ್ಮುಂಜದಲ್ಲಿ ಎರಡು ಎಸ್ ಎಸ್ ಎಲ್ ಸಿ ಮುಸ್ಲಿಂ ವಿದ್ಯಾರ್ಥಿಗಳನ್ನು ಅವರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣವನ್ನಿಟ್ಟು ಪರೀಕ್ಷೆಯನ್ನು ಬರೆಯಲು ಅವಕಾಶ ನೀಡದಿರುವುದು ಪದ್ಮುಂಜ ಸರಕಾರಿ ಪ್ರೌಢಶಾಲೆ ಕ್ರಮ ಒಂದು ದುರಂತವೇ ಸರಿ ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ ಖಂಡಿಸಿದ್ದಾರೆ.
ಭಾರತೀಯ ಸಂವಿಧಾನದ ಕಲಂ 21A6 ರಿಂದ 14 ವರುಷದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಖಾತರಿಪಡಿಸಿದೆ. ಕಲಂ 14 ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆ.
ಕಲಂ 19 ಸ್ವಾತಂತ್ರ ದ ಹಕ್ಕನ್ನು ನೀಡಿದೆ.ಕಲಂ 21 ಜೀವಿಸುವ ಹಕ್ಕನ್ನು ಪ್ರತಿಪಾದಿಸಿದೆ. ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯಗಳಲ್ಲಿ ಕೂಡ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದೆ. ಇದೆಲ್ಲಾವನ್ನು ಗಾಳಿಗೆ ತೂರಿದ ಪ್ರೌಢಶಾಲೆ ಉಪಾಧ್ಯಯರು ಮತ್ತು ಶಿಕ್ಷಕ ವೃಂದದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವದ ಎಲ್ಲಾ ದೇಶಗಳು ಶಿಕ್ಷಣಕ್ಕಾಗಿ ಮೊದಲ ಆದ್ಯತೆಗಳನ್ನು ನೀಡುತ್ತಾ ಬಂದಿದೆ.
ಪದ್ಮುಂಜದಲ್ಲಿ ಸರಕಾರಿ ಪ್ರೌಢಶಾಲೆ ಈ ನಡೆ ಖಂಡನಾರ್ಹ ಹಾಗೂ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರಿಗೆ ಆಗ್ರಹಿಸಿದ್ದಾರೆ.




m
