ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ಪ್ರಥಮ ಮಾಸಿಕ ಸಭೆ ಮತ್ತು ಮೆಂಬರ್ ಶಿಪ್ ವಿತರಣೆ ದಿನಾಂಕ 02/04/2025 ಬುಧವಾರ ರಾತ್ರಿ 9:00 ಗಂಟೆಗೆ ಉಪಾಧ್ಯಕ್ಷ ಮುಹಮ್ಮದ್ ಸಖಾಫಿ ಉಸ್ತಾದರ ಮನೆಯಲ್ಲಿ ಅವರ ದುಆದೊಂದಿಗೆ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಯುನಿಟ್ ಅಧ್ಯಕ್ಷ ಅಬ್ದುಲ್ ಸಮದ್ ಕುರಿಯ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಹ್ಮದ್ ಹಾಶಿಮಿ ಸ್ವಾಗತ ಭಾಷಣ ಮಾಡಿದರು. ಉಪಾಧ್ಯಕ್ಷ ಮುಹಮ್ಮದ್ ಸಖಾಫಿ ಉಸ್ತಾದ್ ಉದ್ಘಾಟನೆ ನೆರವೇರಿಸಿದರು. SYS ಅಜ್ಜಿಕಟ್ಟೆ ಶಾಖೆಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಅಜ್ಜಿಕಟ್ಟೆ ಉಪದೇಶ ನೀಡಿದರು. ನಂತರ ನಾಯಕರ ಸಮ್ಮುಖದಲ್ಲಿ ನೂತನ ಮೆಂಬರ್ ಶಿಪ್ ವಿತರಿಸಲಾಯಿತು. ಕೆಲವು ವಿಷಯಗಳು ಚರ್ಚಿಸಿ ಕೊನೆಗೆ ಖಸೀದತುಲ್ ಬುರ್ದಾ ಕೊನೆಯ ಬೈತುಗಳು ಪಾರಾಯಣ ಮಾಡಿ ಅಧ್ಯಕ್ಷರ ಅನುಮತಿಯೊಂದಿಗೆ ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು.
ವರದಿ:- ಅಬ್ದುಲ್ ರಹೀಂ ಕುರಿಯ ಮೀಡಿಯಾ ಕಾರ್ಯದರ್ಶಿ SSF ಅಜ್ಜಿಕಟ್ಟೆ ಶಾಖೆ




m
