Featured, ರಾಜ್ಯ

ನಾಳೆ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟವಾಗಲಿದೆ; ಪೋಷಕರು ಮತ್ತು ವಿಧ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಿ!!!

*ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟನೆ*

ಬೆಂಗಳೂರು:ದ್ವಿತೀಯ ಪಿಯುಸಿ (ಪ್ರಿ-ಯೂನಿವರ್ಸಿಟಿ ಕೋರ್ಸ್) ಪರೀಕ್ಷೆಯ ಫಲಿತಾಂಶ ನಾಳೆ (ಎಪ್ರಿಲ್ 8) ಮಧ್ಯಾಹ್ನ 12:30ಕ್ಕೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಕಚೇರಿಯಲ್ಲಿ ಫಲಿತಾಂಶವನ್ನು ಘೋಷಿಸಲಿದ್ದಾರೆ.

ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ *https://karresults.nic.in* ಮೂಲಕ ಮಧ್ಯಾಹ್ನ 1:30ರ ನಂತರ ಪರಿಶೀಲಿಸಬಹುದು. ಈ ಪರೀಕ್ಷೆಯನ್ನು ಮಾರ್ಚ್ 1ರಿಂದ 20ರ ವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿರುವುದರ ಜೊತೆಗೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಮಂಡಳಿ ಸೋಮವಾರದಂದು ಹೇಳಿದೆ.

ಮಾನಸಿಕ ಒತ್ತಡ ತಗ್ಗಿಸಿ: ಫಲಿತಾಂಶ ಯಾವುದೇ ಇರಲಿ, ಮುಂದಿನ ಹಂತಕ್ಕೆ ಸಿದ್ಧರಾಗಿ, ಮುಂದಿನ ಹೆಜ್ಜೆಯ ಬಗ್ಗೆ ಗಮನಕೊಡಿ.

ನೀವು ಉತ್ತೀರ್ಣವಾದರೆ “ನಿಮ್ಮ ಕಷ್ಟ-ಪರಿಶ್ರಮಕ್ಕೆ ಸಿಕ್ಕ ಬಹುಮಾನ ಇದು! ಈ ಯಶಸ್ಸು ನಿಮ್ಮ ಭವಿಷ್ಯದ ಮೊದಲ ಹೆಜ್ಜೆ ಮಾತ್ರ. ಮುಂದಿನ ಪ್ರಯಾಣದಲ್ಲಿ ಇನ್ನೂ ಹೆಚ್ಚು ಸಾಧಿಸಲು ಸಿದ್ಧರಾಗಿ. ನಿಮ್ಮ ಕನಸುಗಳನ್ನು ಹಿಂಬಾಲಿಸಿ, ಆದರೆ ಯಾವಾಗಲೂ ನೆಲಕ್ಕೆ ಭದ್ರವಾಗಿ ನಿಲ್ಲುವುದನ್ನು ಮರೆಯಬೇಡಿ.

ಇನ್ನು ಪಲಿತಾಂಶ ಅನುತ್ತೀರ್ಣ ಎಂದಾದರೆ , “ಇದು ಜೀವನದ ಅಂತ್ಯವಲ್ಲ, ಕೇವಲ ಒಂದು ತಾತ್ಕಾಲಿಕ ತಡೆ. ಪ್ರತಿ ವಿಫಲತೆಯು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮ ಸಾಮರ್ಥ್ಯವನ್ನು ಸಂದೇಹಿಸಬೇಡಿ – ಮತ್ತೆ ಪ್ರಯತ್ನಿಸಿ, ಇನ್ನೂ ಬಲವಾಗಿ ಎದ್ದುನಿಲ್ಲಿ. ಯಶಸ್ಸು ನಿಶ್ಚಿತವಾಗಿ ನಿಮ್ಮದಾಗುತ್ತದೆ!”

ಪೋಷಕರು ಗಮನಿಸಬೇಕಾದ ಅಂಶಗಳು, “ನಿಮ್ಮ ಮಕ್ಕಳು ಯಾವ ಪರಿಸ್ಥಿತಿಯಲ್ಲೂ ಇರಲಿ, ಅವರಿಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಅತ್ಯಗತ್ಯ. ಯಶಸ್ಸು ಮತ್ತು ವಿಫಲತೆಗಳು ಜೀವನದ ಭಾಗವೇ. ನಿಮ್ಮ ಮಗು ಅನುತ್ತೀರ್ಣರಾದರೆ, ಅವರನ್ನು ಪ್ರೋತ್ಸಾಹಿಸಿ ಮತ್ತು ಮುಂದಿನ ಹಂತಗಳಿಗೆ ಸಿದ್ಧಪಡಿಸಿ.”

m