ಬೆಳ್ತಂಗಡಿ: ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ಭಾವನೆಗೆ ಧಕ್ಕೆ SDPI ಯಿಂದ ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ಸಲ್ಲಿಕೆ
ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶದಿಂದ ಮುಸ್ಲಿಂ ಧಾರ್ಮಿಕ ವೇಷ ಧರಿಸಿ, ಮಹಿಳೆಯರ ವೇಷ ಧರಿಸಿ ನೃತ್ಯ ಮಾಡಿದ್ದಲ್ಲಲ್ಲದೇ, SDPI ಪಕ್ಷದ ಧ್ವಜ ಕಳ್ಳತನ ಮಾಡಿ, ಪುರುಷಕಟ್ಟುನ ಎಂಬ ಹಿಂದೂ ಸಂಪ್ರದಾಯ ಕಾರ್ಯಕ್ರಮದಲ್ಲಿ ದುರುಪಯೋಗ ಪಡಿಸಿದ್ದಾರೆ. ಕ್ರಿಶ್ಚಿಯನ್ ಧರ್ಮದ ಶಿಲುಬೆ ಯನ್ನು ಕೂಡ ಬಳಸಿ ವೇಷ ಧರಿಸಿ ಧರ್ಮವನ್ನು ಅವಹೇಳನ, ವ್ಯಂಗ್ಯ ಮಾಡಿ ಕೋಮುಗಲಭೆಗೆ ಷಡ್ಯಂತ್ರ ರೂಪಿಸಿದರ ಬಗ್ಗೆ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈ ಗೊಳ್ಳಬೇಕು ಎಂದು ಬೆಳ್ತಂಗಡಿ SDPI ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮದವರು ಸೌಹಾರ್ದತೆಯಿಂದ ಬಾಳುವ ಈ ಭಾಗದಲ್ಲಿ ಕೋಮು ಗಲಭೆಗೆ ಷಡ್ಯಂತ್ರ ಮಾಡಿದರವರ ವಿರುದ್ಧ ಕಠಿಣ ಕ್ರಮ ಜರುಗಿಸಲು SDPI ಒತ್ತಾಯಿಸಿದೆ.

ಧಾರ್ಮಿಕ ಭಾವನೆಗೆ ದಕ್ಕೆ ಹಾಗೂ ಪಕ್ಷದ ಧ್ವಜ ದುರ್ಬಳಕೆ ವಿರುದ್ಧ SDPI ವತಿಯಿಂದ ವೇಣೂರು ಠಾಣೆಯಲ್ಲಿ ದೂರು ದಾಖಲು
ಅರಂಬೂರು : ಭಾರೀ ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ;
ರಿಸರ್ವ್ ಬ್ಯಾಂಕ್ (RBI)ನಿಂದ ವಾಟ್ಸಾಪ್ ಚಾನೆಲ್ ಆರಂಭ!




m

