ಅರಂಬೂರು ಮಾಂಬ್ಲಿ, ಏಪ್ರಿಲ್ 14, 2025: ಇಂದು ಸಂಜೆ ವೇಳೆಗೆ ಸುರಿದ ಗುಡುಗು ಮಿಂಚು ಸಹಿತ ದಾರಕಾರ ಮಳೆಯಿಂದಾಗಿ ಅರಂಬೂರು ಮಾಂಬ್ಲಿ ಸಮೀಪದಲ್ಲಿ ಗಾಳಿ ಮಳೆಗೆ ಮರವೊಂದು ಧರೆಗುರುಳಿ ಮನೆಗೆ ಹಾನಿಯಾದ ಘಟನೆ ನಡೆದಿದೆ.
ಅರಣ್ಯ ಇಲಾಖೆ ಸೇರಿದ ಜಾಗದಲ್ಲಿದ್ದ ದೊಡ್ಡ ಮರವೊಂದು ಭಾರೀ ಗಾಳಿಗೆ ಕುಸಿದು, ಪಕ್ಕದಲ್ಲೇ ಇದ್ದ ಅಬೂಬಕ್ಕರ್ ಹಾಜಿ ಮಾಂಬ್ಲಿ ರವರ ಮನೆಯ ಗೋಡೆಯ ಮೇಲೆ ಬಿದ್ದಿದೆ. ಈ ಘಟನೆಯಿಂದ ಮನೆಯ ಸನ್‌ಶೇಡ್, ಕಿಟಕಿಗಳ ಗಾಜುಗಳು ಒಡೆದು ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.
