ಬೆಳ್ತಂಗಡಿ: ಏ.17- ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿಯಲ್ಲಿ ಪುರುಷರ ಪೂಜೆ ಎಂಬ ಆಚರಣೆಯ ನೆಪದಲ್ಲಿ ಇಸ್ಲಾಂ ಧರ್ಮದ ವಸ್ತ್ರಧಾರಣೆ, ಮಸೀದಿಯ ಪವಿತ್ರವಾದ ಅಝಾನ್ ಕರೆ, ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ರನ್ನು ಅಶ್ಲೀಲವಾಗಿ ಅವಹೇಳನ ಮಾಡಿದ ಸುಮಾರು 20 ರಿಂದ 30 ರಷ್ಟು ಜನರ ಮೇಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವೇಣೂರು ಬ್ಲಾಕ್ ಸಮಿತಿ ವತಿಯಿಂದ ವೇಣೂರು ಆರಕ್ಷಕ ಠಾಣೆಯ ಠಾಣಾಧಿಕಾರಿಯವರಿಗೆ ದೂರು ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಪಕ್ಷದ ಬೆಳ್ತಂಗಡಿ ವಿಧಾನಸಭಾ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಸಮಿತಿ ಸದಸ್ಯರಾದ ಸಲೀಂ ಜಿಕೆ,ವೇಣೂರು ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಬದ್ಯಾರ್, ಬಳಂಜ ಗ್ರಾಮ ಪಂಚಾಯತ್ ಸದಸ್ಯರಾದ ನಿಝಾಮ್ ಕಟ್ಟೆ, ವೇಣೂರು ಬ್ಲಾಕ್ ಸಮಿತಿ ಸದಸ್ಯರಾದ ರಫೀಕ್ ಕನ್ನಡಿಕಟ್ಟೆ , ಜುನೈದ್ ಪಡ್ಡಂದಡ್ಕ , ರಿಯಾಝ್, ಹಮೀದ್ ವೇಣೂರು,ರಿಝ್ವಾನ್ ಬದ್ಯಾರ್ ಉಪಸ್ಥಿತರಿದ್ದರು.




m
