Featured, ಅಂಕಣ, ಸ್ಥಳೀಯ

ಬೆಲೆ ಏರಿಕೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ :-

ಮಂಗಳೂರು, ಏಪ್ರಿಲ್ 28 ರಂದು ಜನತೆಯ ಹೊರೆ ಇಳಿಸಿರಿ ಎಂಬ ಘೋಷಣೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಲೆ ಏರಿಕೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಯನ್ನುದ್ದೇಶಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ನಿಶಾ ವಾಮಂಜೂರ್ ಅವರು ಮಾತನಾಡಿ,

ಸಾಮಾನ್ಯ ಜನರು, ಕೂಲಿಕಾರ್ಮಿಕರು ಬದುಕಲು ಕಷ್ಟ ಪಡುವ ಈ ಸಮಯದಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ.. ದೈನಂದಿನ ಬಳಕೆ ಆಗುವ ಆಹಾರ ಸಾಮಗ್ರಿಗಳಿಂದ ಹಿಡಿದು ಬಸ್ ದರ,ಪೆಟ್ರೋಲ್ ಡಿಸೇಲ್ ಸೇರಿದಂತೆ ಅಡುಗೆ ಅನಿಲ ದರವನ್ನು ಏರಿಸಿದ್ದು ಜನರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

“ಬದುಕಲು ಸಾಧ್ಯವಿಲ್ಲದ ಮಟ್ಟಿಗೆ ಬೆಲೆ ಏರಿಸಿದ್ದೀರಾ, ಜನರ ಬಗ್ಗೆ ಯಾರಿಗೂ ಕಾಳಜಿಯಿಲ್ಲವೇ?”

“ನೀವು ಉದ್ದೇಶಪೂರ್ವಕವಾಗಿ ಕಾರ್ಪೊರೇಟರ್ಗಳನ್ನು ಬೆಂಬಲಿಸಿ, ಜನರನ್ನು ಮರೆತಿದ್ದೀರಾ?”

“ಜನ ಸಾಮಾನ್ಯರ ಪರವಾಗಿ ಕಾನೂನು ಯೋಜನೆ ತರುತ್ತೀರಾ, ಅಥವಾ ಕೇವಲ ಮತಬ್ಯಾಂಕ್ ಗಾಗಿ ಮಾತು ಮಾತು?”

ಇಂದಿನ ನಮ್ಮ ಪ್ರತಿಭಟನೆ ಸರಕಾರಗಳಿಗೆ ಎಚ್ಚರಿಕೆಯಾಗಬೇಕೆಂದು ಹೇಳಿದರು.

ವಿಮ್ ರಾಜ್ಯಾಧ್ಯಕ್ಷರಾದ ಫಾತಿಮಾ ನಸೀಮಾ ಅವರು ಮಾತನಾಡಿ,ಕೇಂದ್ರ ಹಾಗೂ ರಾಜ್ಯ ಸರಕಾರ ಉಜ್ವಲ ಯೋಜನೆ, ಗ್ಯಾರಂಟಿ ಯೋಜನೆ ಮೂಲಕ ಜನತೆಯನ್ನು ಮೋಸ ಮಾಡಿ ಮತ್ತೆ ಮತ್ತೆ ವಂಚನೆ ಮಾಡಿ ಬಡತನಕ್ಕೆ ತಳ್ಳುತ್ತಿದೆ.ಜನರ ಪರವಾದ ಕಾನೂನು ಯೋಜನೆ ತಂದು ನ್ಯಾಯ ಕೊಡಿಸಿ ಇಲ್ಲವಾದಲ್ಲಿ ಇದೇ ರೀತಿಯ ಓಲೈಕೆ ರಾಜಕೀಯ ನಡೆಸಿದರೆ ನಿಮಗೆ ಸೋಲು ಖಂಡಿತಾ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾಶ್ಮೀರದ ಪಹಾಲ್ಗಮ್ ನಲ್ಲಿ, ಉಗ್ರರ ದಾಳಿಗೆ ಬಲಿಯಾದವರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಮ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ, ವಿಮ್ ಜಿಲ್ಲಾ ಜೊತೆ ಕಾರ್ಯದರ್ಶಿ ಅಝ್ಛ್ವೀನ, sdpi ಮಂಗಳೂರು ನಗರ ಜಿಲ್ಲಾ ಸದಸ್ಯೆ ಸಂಶಾದ್ ಅಬೂಬಕ್ಕರ್, ಗುರುಪುರ ಪಂಚಾಯತ್ ಅಧ್ಯಕ್ಷರಾದ ಸಫಾರ ಗುರುಪುರ ಉಪಸ್ಥಿತ ರಿದ್ದರು. ನಸೀಮಾ ರಶೀದ್ ಕಾರ್ಯಕ್ರಮ ನಿರೂಪಿಸಿ, ಫೌಝಿಯಾ ರವರು ಧನ್ಯವಾದ ಗೈದರು.

m

Related Posts