Featured, ಅಂಕಣ, ರಾಜಕೀಯ, ರಾಜ್ಯ, ರಾಷ್ಟ್ರೀಯ, ಲೇಖನ, ಸ್ಥಳೀಯ

ಕೋಮು ಸಾಮರಸ್ಯಕ್ಕೆ ಬೆದರಿಕೆಯಾಗುವ ಘಟನೆಗಳು – ಸರ್ಕಾರ, ಮಾಧ್ಯಮಗಳು ಜವಾಬ್ದಾರಿ ವಹಿಸಲೇಬೇಕು – ರಶೀದ್ ಜಟ್ಟಿಪಳ್ಳ

ಕೋಮು ಸಾಮರಸ್ಯಕ್ಕೆ ಬೆದರಿಕೆಯಾಗುವ ಘಟನೆಗಳು – ಸರ್ಕಾರ, ಮಾಧ್ಯಮಗಳು ಜವಾಬ್ದಾರಿ ವಹಿಸಲೇಬೇಕು – ರಶೀದ್ ಜಟ್ಟಿಪಳ್ಳ

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಹತ್ಯೆಗಳು ಮತ್ತು ಕೋಮು ಘರ್ಷಣೆಗಳ ಸರಣಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಗಂಭೀರವಾದ ಬೆದರಿಕೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಅಮಾಯಕ ಮಾನಸಿಕ ಅಸ್ವಸ್ಥರಾದ ಅಶ್ರಫ್ ಹತ್ಯೆ, ನಂತರದಲ್ಲಿ ಉಂಟಾದ ರೌಡಿ ಶೀಟರ್ ಸುಹಾಸ್ ಹತ್ಯೆ ಇದು ರಾಜಕೀಯ ಮಾಡಲು ಯತ್ನಿಸಿ ಪ್ರತೀಕಾರದ ಹಿಂಸಾಚಾರ ಎಂದು ಬಿಂಬಿಸುವ ಶಕ್ತವಾದ ಯತ್ನ ನಡೆದಿತ್ತು, ಮತ್ತು ಮುಸ್ಲಿಂ ಸಮುದಾಯದ ವಿರುದ್ಧದ ದಾಳಿಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿವೆ.

ಈ ಘಟನೆಗಳ ಹಿಂದೆ ದ್ವೇಷಪೂರಿತ ಪ್ರಚಾರ, ಕೋಮುವಾದಿ ಪ್ರೇರಿತ ಹಿಂಸೆ ಮತ್ತು ಮಾಧ್ಯಮಗಳ ಪಕ್ಷಪಾತಪೂರಿತ ವರದಿಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ಆರೋಪಗಳು ಬೆಳೆದಿವೆ, ಮಾತ್ರವಲ್ಲ ಇದು ರೂಡಿಯಾಗಿ ಬೆಳೆದು ಬಂದಿರುವುದು ಕೂಡ ಗಮನಾರ್ಹ.

ಇತ್ತೀಚಿನ ಘಟನೆಗಳನ್ನು ವರದಿ ಮಾಡುವಾಗ ಕೆಲ ಮಾಧ್ಯಮಗಳು ಸಮತೋಲನವನ್ನು ಕಾಪಾಡಿಕೊಳ್ಳದೆ, ಒಂದು ಸಮುದಾಯದ ವಿರುದ್ಧ ದ್ವೇಷವನ್ನು ಹರಡುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ . ರಾಜಕಾರಣಿಗಳು ಮತ್ತು ಕೋಮುವಾದಿಗಳು ಈ ಸಂದರ್ಭದಲ್ಲಿ ವಿವೇಕಹೀನ ಹೇಳಿಕೆಗಳನ್ನು ನೀಡಿ ಪರಿಸ್ಥಿತಿಯನ್ನು ಇನ್ನಷ್ಟು ಸ್ಫೋಟಕವಾಗಿಸಿದ್ದಾರೆ. ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಹಿಂದೆ ಈ ರೀತಿಯ ದ್ವೇಷಪೂರಿತ ಪ್ರಚಾರವೇ ಮೂಲ ಕಾರಣವೆಂದು ಸಮಾಜದ ಪ್ರಬುದ್ಧ ವರ್ಗಗಳು ಟೀಕಿಸಿದ್ದಾರೆ.

ಈ ನಡುವೆ, ಸಾಮಾಜಿಕ ಸಮರಸತೆಗೆ ಅಪಾಯವಾಗುವಂತಹ ಘಟನೆಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯ ನೇತೃತ್ವವು ಒತ್ತಾಯಿಸಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ಕೋಮು ದ್ವೇಷದ ಪ್ರಚಾರ, ದ್ವೇಷ ಭಾಷಣ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ರಾಜ್ಯವು ದೊಡ್ಡ ಮಟ್ಟದ ಅಶಾಂತಿಗೆ ಗುರಿಯಾಗಬಹುದು. ಮತ್ತು ಕೆಲವೊಂದು ಸನ್ನಿವೇಶಗಳು ಮತ್ತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರುಗಳ ಹೇಳಿಕೆಗಳು ಯಾರನ್ನೋ ದ್ವೇಶಿಸಿ, ಯಾರನ್ನೋ ಮೆಚ್ಚಿಸಿ ತೃಪ್ತಿಡಿಸುವ ಹೇಳಿಕೆಯೋ, ಅಥವಾ ಇನ್ನಾರಿಗೋ ಹೇದರಿ ನೀಡುವ ಹೇಳಿಕೆಯೋ ಎಂಬುದು ಪ್ರಶ್ನಾತೀತ.

ಈ ಕೊಲೆ ಪ್ರಕರಣ, ಒತ್ತಾಯಪೂರ್ವಾಕ ಬಂದ್, ಹಲ್ಲೇ , ತಳ್ವಾರ್ ದಾಳಿ, ಮುಂತಾದ ಘಟನೆಗಳನ್ನು ತನಿಖೆ ಮಾಡಿ, ಅಪರಾಧಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸುವುದು ಅಗತ್ಯ. ಅದರ ಜೊತೆಗೆ, ದ್ವೇಷ ಹರಡುವ ಮಾಧ್ಯಮಗಳು, ರಾಜಕಾರಣಿಗಳು ಮತ್ತು ಸಾಮೂಹಿಕ ಹಿಂಸೆಗೆ ಪ್ರೇರೇಪಿಸುವ ಸಂಘಟನೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರವು ಈ ನಿಟ್ಟಿನಲ್ಲಿ ತಕ್ಷಣ ನಡವಳಿಕೆ ಕೈಗೊಂಡರೆ ಮಾತ್ರವೇ ಕರಾವಳಿ ಮತ್ತು ರಾಜ್ಯದ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಧ್ಯ.

“ದ್ವೇಷದ ಬದಲು ಸೌಹಾರ್ದತೆ, ಪ್ರತೀಕಾರದ ಬದಲು ನ್ಯಾಯ, ಹಿಂಸೆಯ ಬದಲು ಶಾಂತಿಯನ್ನು ಪ್ರೋತ್ಸಾಹಿಸುವುದು ಸಕಾಲಿಕ ಅಗತ್ಯತೆಯಾಗಿದೆ”             ರಶೀದ್ ಜಟ್ಟಿಪಳ್ಳ🖊"ದ್ವೇಷದ ಬದಲು ಸೌಹಾರ್ದತೆ, ಪ್ರತೀಕಾರದ ಬದಲು ನ್ಯಾಯ, ಹಿಂಸೆಯ ಬದಲು ಶಾಂತಿಯನ್ನು ಪ್ರೋತ್ಸಾಹಿಸುವುದು ಸಕಾಲಿಕ ಅಗತ್ಯತೆಯಾಗಿದೆ"             ರಶೀದ್ ಜಟ್ಟಿಪಳ್ಳ🖊

ಕೋಮು ಹಿಂಸೆಯನ್ನು ತಡೆಗಟ್ಟಲು ಸರ್ಕಾರ ಮಾತ್ರವಲ್ಲ, ಸಾಮಾನ್ಯ ನಾಗರಿಕರು, ಮಾಧ್ಯಮಗಳು ಮತ್ತು ಸಾಮಾಜಿಕ ಸಂಸ್ಥೆಗಳು ಸಹ ಜವಾಬ್ದಾರಿ ವಹಿಸಬೇಕು. ದ್ವೇಷದ ಬದಲು ಸೌಹಾರ್ದತೆ, ಪ್ರತೀಕಾರದ ಬದಲು ನ್ಯಾಯ, ಹಿಂಸೆಯ ಬದಲು ಶಾಂತಿಯನ್ನು ಪ್ರೋತ್ಸಾಹಿಸುವುದು ಸಕಾಲಿಕ ಅಗತ್ಯತೆಯಾಗಿದೆ. ಇಲ್ಲದಿದ್ದರೆ, ಕರ್ನಾಟಕವು ಇನ್ನಷ್ಟು ಹಿಂಸಾಚಾರ ಮತ್ತು ಅಸ್ಥಿರತೆಯ ದಾರಿಗೆ ಇಳಿಯುವ ಅಪಾಯವಿದೆ.

ರಾಜ್ಯ ಸರ್ಕಾರವು ಕೋಮು ಸಂಘರ್ಷಗಳನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳು ಜವಾಬ್ದಾರಿಯುತವಾಗಿ ವರದಿ ಮಾಡಬೇಕು. ಸಮಾಜವು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ದಿಶೆಯಲ್ಲಿ ಕೆಲಸ ಮಾಡಬೇಕು. ಇದು ಕರ್ನಾಟಕದ ಶಾಂತಿ ಮತ್ತು ಪ್ರಗತಿಗೆ ಅತ್ಯಗತ್ಯ.

m