ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿರುವ ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ನಿರ್ದೇಶಕರು,ಅಲ್ ಅಮೀನ್ ಸದಸ್ಯರಾದ ಎಸ್.ಎಂ.ಅಬ್ದುಲ್ಲ ಗೂನಡ್ಕ ರವರನ್ನು ಅಲ್ ಅಮೀನ್ ವೆಲ್ಫೇರ್ ವತಿಯಿಂದ ಬೀಳ್ಕೊಡಲಾಯಿತು.ಅಲ್-ಅಮೀನ್ ನಿರ್ದೇಶಕರಾದ ಲತೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖತೀಬರಾದ ಬಹು.ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿಯವರು ಹಜ್ ಯಾತ್ರಿಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ಉಸ್ತಾದರು ,ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು,ಅಲ್-ಅಮೀನ್ ಅಧ್ಯಕ್ಷರು, ಪದಾಧಿಕಾರಿಗಳು, ಸುನ್ನೀ ಸಂಘ ಕುಟುಂಬಗಳ ಅಧ್ಯಕ್ಷರುಗಳು ಪದಾಧಿಕಾರಿಗಳು , ಪಂಚಾಯತ್ ಸದಸ್ಯರುಗಳು ಜಮಾಅತಿನ ಮಾಜಿ ಅಧ್ಯಕ್ಷರುಗಳು, ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.





m
