ಉಪ್ಪಿನಂಗಡಿ: ಉರುವಾಲು ಗ್ರಾಮದ ಕುಪ್ಪೆಟ್ಟಿ ಪ್ರದೇಶದಲ್ಲಿ ಗೂಡ್ಸ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧವಾಗಿ ವಾಹನ ಚಾಲಕ ಜಯಂತ್ ಗೌಡನನ್ನು ಬಂಧಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಮೂವರು ಸೈನಿಕರು ಸಾವು
ತೆಕ್ಕಾರು ದ್ವೇಷ ಭಾಷಣ: ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಕೋಮು ಸಾಮರಸ್ಯಕ್ಕೆ ಬೆದರಿಕೆಯಾಗುವ ಘಟನೆಗಳು – ಸರ್ಕಾರ, ಮಾಧ್ಯಮಗಳು ಜವಾಬ್ದಾರಿ ವಹಿಸಲೇಬೇಕು – ರಶೀದ್ ಜಟ್ಟಿಪಳ್ಳ
ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತ ಜಯಂತ್ ಗೌಡ ಕುಪ್ಪೆಟ್ಟಿಯ ಬದ್ರುದ್ದೀನ್ ಎಂಬ ವ್ಯಕ್ತಿಗೆ ಈ ಜಾನುವಾರುಗಳನ್ನು ತಲುಪಿಸುತ್ತಿದ್ದ. ಈ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ, ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ನಾಲ್ಕು ಜಾನುವಾರುಗಳು ಪತ್ತೆಯಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಜಯಂತ್ ಗೌಡ, ಬದ್ರುದ್ದೀನ್ ಸೇರಿದಂತೆ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




m

