ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸೇನಾ ವಾಹನವೊಂದು ನಿಯಂತ್ರಣ ತಪ್ಪಿ 700 ಅಡಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ.
ಕಾಶ್ಮೀರದ ರಾಂಬನ್ ಜಿಲ್ಲೆಯ ಪೆಟಾತ್ರಿ ಚಸ್ಮಾ ಎಂಬ ಸ್ಥಳದಲ್ಲಿ ಇಂದು (ಮೇ 4) ಬೆಳಿಗ್ಗೆ 11.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ಬಗ್ಗೆ ಪೊಲೀಸ್ ಹೇಳಿಕೆಯಂತೆ “ಸೈನಿಕರು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ, ಒಂದು ವಾಹನ ನಿಯಂತ್ರಣ ತಪ್ಪಿ 700 ಅಡಿ ಕಂದಕಕ್ಕೆ ಬಿದ್ದಿತು. ಇದರಲ್ಲಿ ಆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸೈನಿಕರಾದ ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮನ್ ಬಹದ್ದೂರ್ ಸಾವನ್ನಪ್ಪಿದರು” ಎಂದು ಹೇಳಿದರು. ಇದು ವರದಿಯಾಗಿದೆ.
ಅಪಘಾತ ಸ್ಥಳದಲ್ಲಿ ಸೇನೆ, ಪೊಲೀಸರು, ರಾಜ್ಯ ವಿಪತ್ತು ಪರಿಹಾರ ತಂಡಗಳು ಮತ್ತು ಸ್ಥಳೀಯ ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣವಾಗಿ ನಾಶವಾಗಿದೆ.




m
