Featured, ಅಂಕಣ, ಸ್ಥಳೀಯ

ತೆಕ್ಕಾರು ದ್ವೇಷ ಭಾಷಣ: ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ವತಿಯಿಂದ ದೂರು ದಾಖಲು

ಬೆಳ್ತಂಗಡಿ (ಮೆ-5):ತೆಕ್ಕಾರಿನ ಶ್ರೀ ಗೋಪಾಲಕೃಷ್ಣ ದೇಗುಲದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬ್ಯಾರಿ ಜನಾಂಗದ ಕುರಿತು ಅವಹೇಳನ‌ ಮಾಡಿ, ಕೋಮು ಪ್ರಚೋದನಕಾರಿ ಭಾಷಣ ಮಾಡಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಭಾನುವಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ನಾಯಕರ ನಿಯೋಗದಿಂದ ದೂರು ನೀಡಲಾಯಿತು.

  ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಊರಿನ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಭಾಷಣ ಮಾಡಿರುವ ಶಾಸಕ ಹರೀಶ್ ಪೂಂಜಾ ಮತ್ತು ಬ್ರಹ್ಮಕಲಶೋತ್ಸವ ಆಯೋಜಕರ ವಿರುದ್ಧ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಂಧನ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

   ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಂಬಲಿತ ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯರಾದ ಅನ್ವರ್ ತೆಕ್ಕಾರು, ಎಸ್‌ಡಿಪಿಐ ಕಣಿಯೂರು ಬ್ಲಾಕ್ ಉಪಾಧ್ಯಕ್ಷರಾದ ಅಬ್ದುಲ್ ನಝೀರ್, ಕೋಶಾಧಿಕಾರಿ ಫೈಝಲ್ ಮುರುಗೋಳಿ, ತೆಕ್ಕಾರು ಬೂತ್ ಅಧ್ಯಕ್ಷರಾದ ಸಿನಾನ್ ತೆಕ್ಕಾರು, ಅಶ್ರಫ್ ಕೂಡೋಳ್, ಸಮದ್ ಹೊಸಮೊಗರು, ಅಸ್ಬಕ್ ತೆಕ್ಕಾರು ಉಪಸ್ಥಿತರಿದ್ದರು.

m

Related Posts