Featured, ಅಂಕಣ, ಸ್ಥಳೀಯ

ಜಟ್ಟಿಪಳದಲ್ಲಿ SBS ವತಿಯಿಂದ ಮಾದಕ ದ್ರವ್ಯ ವಿರುದ್ಧ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

ಸುಳ್ಯ: ಸುನ್ನಿ ಬಾಲ ಸಂಘ (SBS) ಜಟ್ಟಿಪಳ ಯೂನಿಟ್ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜಾಗೃತಿ ಅಭಿಯಾನ ಹಾಗೂ ಸ್ನೇಹ ಸಹವಾಸ ಏಕದಿನ ಶಿಬಿರವನ್ನು ಮೇ 27, ಮಂಗಳವಾರ ಬೆಳಗ್ಗೆ 8:30ಕ್ಕೆ ಬುಸ್ತಾನುಲ್ ಉಲೂಂ ಮದ್ರಸ, ಜಟ್ಟಿಪಳದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಹುಸೈನ್ ಪಾಷಾ ತಂಙಳ್ ಹಾಗೂ ಇರ್ಫಾನ್ ಹಿಮಮಿ ವಿಚಾರ ಮಂಡನೆ ನಡೆಸಲಿದ್ದಾರೆ.

ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸದರ್ ಮುಅಲ್ಲಿಂ ಲತೀಫ್ ಸಖಾಫಿ ಗೂನಡ್ಕ ಹಾಗೂ ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿ ಅವರು, ಶಿಬಿರವು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ಅಪಾಯದ ಬಗ್ಗೆ ಅರಿವು ಮೂಡಿಸಲು ಹಾಗೂ ಪರಸ್ಪರ ಸ್ನೇಹ ವೃದ್ಧಿಗೆ ಸಹಾಯ ಮಾಡಲಿರುವುದಾಗಿ ತಿಳಿಸಿದ್ದಾರೆ.

m