Featured, ಅಂಕಣ, ಸ್ಥಳೀಯ

ಸಂಪಾಜೆ: ಲೈನ್ ಮ್ಯಾನ್‌ಗೆ ವಿದ್ಯುತ್ ಶಾಕ್ – ಕೆವಿಜಿ ಆಸ್ಪತ್ರೆಗೆ ದಾಖಲಾದ ಘಟನೆ

ಸಂಪಾಜೆ, ಮೇ 26: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡಪಾಲ ಬಳಿಯ ವರ್ಗೀಸ್ ತಿರುವಿನಲ್ಲಿ ವಿದ್ಯುತ್ ಲೈನ್ ದುರಸ್ತಿ ವೇಳೆ ಲೈನ್ ಮ್ಯಾನ್ ನವೀನ್ ಅವರಿಗೆ ಶಾಕ್ ಹೊಡೆದ ಘಟನೆ ಇಂದು (ಮೇ 26) ನಡೆದಿದೆ.

ಕೆಲಸ ನಿರ್ವಹಿಸುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಅವರು ಕೆಳಗೆ ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ ಆ್ಯಂಬ್ಯುಲೆನ್ಸ್‌ಗೆ ಸಂಪರ್ಕಿಸಿ, ನವೀನ್ ಅವರನ್ನು ತುರ್ತು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ನವೀನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿವೆ.

m

Related Posts