ಎಸ್ಎಸ್ಎಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ಬಳಿಕ ಶಿದಾ ಎಸ್ ಇವರು 602 ಅಂಕಗಳನ್ನು ಗಳಿಸಿರುತ್ತಾರೆ. ಪಲಿತಾಂಶ ಪ್ರಕಟಗೊಂಡ ಈ ಹಿಂದೆ ಇವರಿಗೆ 598 ಬಂದಿತ್ತು, ಮರು ಮೌಲ್ಯಮಾಪನ ನಂತರದಲ್ಲಿ 4 ಅಂಕಗಳು ಸೇರ್ಪಡೆಯಾಗಿದೆ.
ಕುಮಾರಿ ಶಿದಾ ಎಸ್ ಇವರು ಆಲೆಟ್ಟಿ ಗ್ರಾಮ ಪೆರಾಜೆ ಕಲ್ಚರ್ಪೆ ಎಂ ಎಂ ಐ ಎಸ್ ಕುಟುಂಬದ ದಿ| ಹಾಜಿ ಎಂ ಎಂ ಇಸ್ಮಾಯಿಲ್ ಇವರ ಮೊಮ್ಮಗಳು ಹಾಗೂ ಉದ್ಯಮಿ ಶಾಹಿದ್ ಎಂ ಐ ಪೆರಾಜೆ ಹಾಗೂ ನಸೀಮ ದಂಪತಿಗಳ ಪುತ್ರಿ.
ಶಿದಾ ಎಸ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡಿದ್ದಾರೆ.




m
