ಸುಳ್ಯ, ಏಪ್ರಿಲ್ 23:
ಇಂದು ಪ್ರಕಟಗೊಂಡ SSLC ಪರೀಕ್ಷೆಯ ಫಲಿತಾಂಶದಲ್ಲಿ ಸುಳ್ಯ ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಸುಳ್ಯ ಅರಂತೋಡು ನಿವಾಸಿ ಫಾತಿಮತ್ ರಿಂಶ 601 ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
625 ಅಂಕಗಳ ಪೈಕಿ 601 ಅಂಕಗಳನ್ನು ಗಳಿಸಿರುವ ಅವರು ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಫಾತಿಮತ್ ರಿಂಶ ಇವರು ಅರಂತೋಡು ನಿವಾಸಿ ಎಸ್. ಎಂ ಅಬ್ದುಲ್ ಮಜೀದ್ ಮತ್ತು ಜಸೀಲಾ ದಂಪತಿಗಳ ಪುತ್ರಿ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.





m
