Featured, ಅಂಕಣ, ಸ್ಥಳೀಯ

ಸುಳ್ಯ ಸುನ್ನಿ ಸೆಂಟರ್ ಗೆ ಎಸ್ ವೈ ಎಸ್ ರಾಜ್ಯ ನಾಯಕರ ಭೇಟಿ.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ನೂತನ ಸಮಿತಿ ನಾಯಕರು ಅನಿರೀಕ್ಷಿತವಾಗಿ ಸುಳ್ಯ ಸುನ್ನೀ ಸೆಂಟರ್ ಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಅಲಿ ಶಿವಮೊಗ್ಗ ರವರಿಗೆ SჄS ಸುಳ್ಯ ಝೋನ್ ಸಮಿತಿ ವತಿಯಿಂದ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಿಸಲಾಯಿತು. ರಾಜ್ಯ ನಾಯಕರ ಆಯ್ಕೆ ಬಳಿಕ ಪ್ರಥಮವಾಗಿ ಸುಳ್ಯ ದಲ್ಲಿ ಸಂಗಮಿಸಿದ ಮೂರು ರಾಜ್ಯ ನಾಯಕರು ಸುಳ್ಯ ಝೋನ್ ಸಂಘಟನೆಯ ಕಾರ್ಯವೈಖರಿಯನ್ನು ಅವಲೋಕಿಸಿ ಸಾಂತ್ವನ ಕಾರ್ಯಾಚರಣೆಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಸುಳ್ಯ ಝೋನ್ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ ವೈ ಎಸ್ ಸುಳ್ಯ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, ಉಪಾಧ್ಯಕ್ಷ ಎ.ಎಂ.ಫೈಝಲ್ ಝುಹ್‌ರಿ, ಮುಸ್ಲಿಂ ಜಮಾಅತ್ ನಾಯಕ ಎಸ್.ಪಿ. ಅಬೂಬಕ್ಕರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಪ್ರಧಾನ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ರವರು ಉಪಸ್ಥಿತರಿದ್ದರು.

m

Related Posts