Featured, ಅಂಕಣ, ಇತರೆ, ಸ್ಥಳೀಯ

ಮಳೆಗಾಲದಲ್ಲಿ ಕರ್ತವ್ಯ ನಿರ್ವಹಣೆಗೆ ನೆರವಾಗಿ ಎಸ್ ವೈ ಎಸ್: ಪೋಲೀಸ್ ಇಲಾಖೆಗೆ ಛತ್ರಿ ವಿತರಣೆ

ಮಳೆಗಾಲದಲ್ಲಿ ಕರ್ತವ್ಯಕ್ಕೆ ದಾವಿಸುವ ಪೋಲೀಸ್ ಸಿಬ್ಬಂದಿಗಳಿಗೆ ಅಗತ್ಯವಾಗಿ ಬೇಕಾದ ಛತ್ರಿಗಾಗಿ ಠಾಣಾಧಿಕಾರಿಯವರು ಎಸ್ ವೈ ಎಸ್ ಸುಳ್ಯ ಝೋನ್ ತಂಡದೊಂದಿಗೆ ಅಪೇಕ್ಷಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ಎಸ್ ವೈ ಎಸ್ ಸುಳ್ಯ ಝೋನ್ ಸಾಂತ್ವನ ಇಸಾಬ ತಂಡವು ಸಹಕಾರ್ಯಕರ್ತರ ಸಹಕಾರದೊಂದಿಗೆ ಸುಮಾರು 20 ಛತ್ರಿಗಳನ್ನು ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮುಖಾಂತರ ಠಾಣೆಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಎಸ್ ವೈ ಎಸ್ ಸುಳ್ಯ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಹಸೈನಾರ್ ಗುತ್ತಿಗಾರು, ಸುಳ್ಯ ಸರ್ಕಲ್ ಸಾಂತ್ವನ ಇಸಾಬ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಸುಳ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ನೌಷಾದ್ ಕೆರೆಮೂಲೆ, ಕಬೀರ್ ಜಟ್ಟಿಪಳ್ಳ, ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಹಾಗೂ ಪೋಲೀಸ್ ಸಿಬ್ಬಂದಿಗಳು ಹಾಜರಿದ್ದರು.

m

Related Posts