ಕಡಬ, ಜೂನ್ 16 – ಕಡಬ ತಾಲೂಕಿನ ಎಡಮಂಗಲ ಸಮೀಪದ ಚಾರ್ವಾಕ ಗ್ರಾಮದಲ್ಲಿ ಸೋಮವಾರ ಸಂಜೆ ವಿದ್ಯುತ್ ಶಾಕ್‌ನಿಂದ ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಮೃತರು ದೋಳ್ಪಾಡಿ ನಿವಾಸಿ ಪುರಂದರ ಅವರ ಪತ್ನಿ ರೇಖಾ (35) ಎಂಬವರಾಗಿದ್ದಾರೆ. ಮಾಲೀಕತ್ವದಲ್ಲಿದ್ದ ಮನೆ ಸಮೀಪದ ನೀರಿನ ಪಂಪ್ ಚಾಲನೆಗೆ ಹೋಗಿದ್ದ ವೇಳೆ, ಪಂಪ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಪರೀಕ್ಷಿಸಲು ಕೇಬಲ್ ತಪಾಸಿಸಿದ ಸಂದರ್ಭ ದುರಂತ ಸಂಭವಿಸಿದೆ. ಶಾಕ್ ಹೊಡೆದು ಅವರು ಸ್ಥಳದಲ್ಲೇ ಬಿದ್ದಿದ್ದು, ತಕ್ಷಣ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಗಾರದಲ್ಲಿ ಇರಿಸಲಾಗಿದೆ. ಘಟನೆಯ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




m
