Featured, ಅಂಕಣ, ಲೇಖನ, ಸ್ಥಳೀಯ

SCHOOL BAG

ಶಾಲಾ ಶಿಕ್ಷಣದಲ್ಲಿ Digital class, Smart class, AI ನಂತಹ ನೂತನ ಆವಿಷ್ಕಾರಗಳು, ಬೋಧನಾ ತಂತ್ರಗಳು, ಸುಲಭದ ಸೂತ್ರಗಳು ಸಕ್ರಿಯವಾಗಿದ್ದರು ಕೂಡ ಮಕ್ಕಳ ಬ್ಯಾಗ್ ನ ತೂಕದಲ್ಲಿ ಏರಿಕೆ ಆಗಿದೆಯೇ ಹೊರತು ಇಳಿಕೆ ಆಗುತಿಲ್ಲ.

ಶಾಲಾ ಮಕ್ಕಳು ಸ್ವಂತ ತೂಕದ ಶೇಕಡಾ 10% ಹೆಚ್ಚು ಭಾರವನ್ನುಹೊರಬಾರದು. 30 ಕಿ ಲೋ ಗ್ರಾಂ ತೂಕವಿರುವ ಮಗು 3 ಕಿಲೋಕ್ಕಿಂತಲೂಅಧಿಕ ಬಾರ ಹೊತ್ತು ನಡೆಯಬಾರದು.ಆದರೆ ನಮ್ಮ ಊರುಗಳಲ್ಲಿ ಒಂದು ನಾಲ್ಕನೇ ತರಗತಿ ಬಾಲಕನಸ್ಕೂಲ್ ಬ್ಯಾಗ್ ಐದುವರೆ ಕೆ ಜಿ ತೂಕವಿರುತ್ತದೆ. ಅದರೊಂದಿಗೆ ಲಂಚ್ಬ್ಯಾಗ್ ಬೇರೆ. ಒಂದು ಕೆಜಿ ಗಿಂತಲೂ ಭಾರವಿರುತ್ತದೆ. ಹಾಗೆಂದು ಮಗುವಿನಊಟದ ಪ್ರಮಾಣ ವನ್ನು ಕಡಿಮೆಮಾಡಬೇಕೆಂದಲ್ಲ. ಬದಲು ಕೆಜಿ ಮಕ್ಕಳಿಗೆಒಂದು ದಿನದಲ್ಲಿ ಗರಿಷ್ಟ ಎಷ್ಟು ತರಗತಿಗಳಿರುತ್ತದೆಯೋ ಆ ವೇಳಾ ಪಟ್ಟಿಗೆಅನುಸಾರವಾದ ಪುಸ್ತಕಗಳನ್ನು ಮಾತ್ರ ಬ್ಯಾಗ್ ನಲ್ಲಿ ತುಂಬಬೇಕು. ಮಕ್ಕಳು ಬ್ಯಾಗ್ ನ ಭಾರ ಹೊರುಲಿರುವ ಕತ್ತೆಗಳಲ್ಲ.  ಇದು ತಾಯಂದಿರು ಗಮನಿಸಬೇಕಾದ ವಿಷಯವಾಗಿದೆ.ಮಗು ಅಮಿತ ಭಾರ ಹೊರುವುದರಿಂದ ಮಗುವಿನ ಬೆನ್ನೆಲುಬುಬಾಗುತ್ತದೆ. ನಿರಂತರವಾಗಿ ಅಧಿಕ ಭಾರವನ್ನು ಹೊರುವ ಮಗುವಿನ ಬೆನ್ನೆಲುಬು15 ಡಿಗ್ರಿಯವರೆಗೂ ಬಾಗುವ ಸಾಧ್ಯತೆಯಿದೆ. ಶಿಶುರೋಗ ತಜ್ಞರ ಸಂಘ ನಡೆಸಿದ ಸರ್ವೆಯ ಅಂಕಿ ಅಂಶದ ಪ್ರಕಾರ ಶೇ 30% ರಷ್ಟು ವಿದ್ಯಾರ್ಥಿಗಳು ಅಸ್ತಿ ಅಥವಾ ಬೆನ್ನೆಲುಬು ಸಂಬoಧವಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವರ್ಷದ ಕನಿಷ್ಠ 250 ರಿಂದ 300 ದಿನಗಳು ಎರಡುಹೊತ್ತು ಬೆನ್ನಲ್ಲಿ ಭಾರ ಹೊರುವ ಮಕ್ಕಳ ಬೆನ್ನು ಬಾಗದಿದ್ದರೆ ತಾನೆ ಅಚ್ಚರಿ….!

ಪಠ್ಯಪುಸ್ತಕ, ನೋಟ್‌ಬುಕ್, ವಾಟರ್ ಬಾಟಲ್ ಗಳ ಭಾರವನ್ನು ಗರಿಷ್ಟ ಕಡಿಮೆ ಮಾಡಿದರೆ ಸ್ಕೂಲ್ ಬ್ಯಾಗ್‌ನ ತೂಕವನ್ನು ಒಂದುವರೇ ಕಿಲೋ ಗಿಂತಲೂ ಇಳಿಸಬಹುದು.

ಸ್ಕೂಲ್ ಬ್ಯಾಗ್ ಖರೀದಿಸುವಾಗ ಅದರ ತೂಕವನ್ನು ಪೋಷಕರು ಮುಖ್ಯವಾಗಿಗಮನಿಸಬೇಕು. 250-3೦೦ ಗ್ರಾಂ ಗಿಂತಲೂ ಅಧಿಕ ಭಾರವಿರುವ ಬ್ಯಾಗ್‌ಗಳನ್ನು ಖರೀದಿಸದೇ ಇರುವುದು ಉತ್ತಮ.

ಬರಹ:- ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ಕೊಡಗು

m

Related Posts