ಜೂನ್ 26:- ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾದ 100 ನೇ ವಾರ್ಷಿಕ ಸ್ಥಾಪಕ ದಿನಾಚರಣೆಯ ಅಂಗವಾಗಿ ಪ್ರಮುಖ ದಾರ್ಮಿಕ ಸಂಸ್ಥೆ ಸುನ್ನೀ ಮಹಲ್ ಮಂಚಿಯಲ್ಲಿ ಸಂಸ್ಥೆಯ ಸಾರಥಿ ಎಣ್ಮೂರು ಉಸ್ತಾದರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದರ್ ಉಸ್ತಾದ್ ರಫೀಕ್ ಝುಹ್ರಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕ ಅಹ್ಮದ್ ಹಾಶಿಮಿ, ಸುನ್ನಿ ಮಹಲ್ ಮದ್ರಸದ ಅಧ್ಯಕ್ಷ ಮುತ್ತಲಿಬ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಪಟ್ಟೂರಿ ಭಾಗವಹಿಸಿದರು. ಸುನ್ನೀ ಮಹಲ್ ಸಂಸ್ಥೆಯಲ್ಲಿ ಕಲಿಯುತ್ತಿರುವ ಮುತಅಲ್ಲಿಮರು, ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಣ್ಮೂರು ಉಸ್ತಾದರ ದುಆದೊಂದಿಗೆ ಸ್ವಲಾತಿನೊಂದಿಗೆ ಕಾರ್ಯಕ್ರಮ ನಿರೂಪಿಸಲಾಯಿತು.
ವರದಿ:- ಅಹ್ಮದ್ ಹಾಶಿಮಿ ಕುರಿಯ






m
