Featured, ಅಂಕಣ, ಸ್ಥಳೀಯ

SჄS ರೆಂಜ ಸರ್ಕಲ್ C ಲೀಡರ್ಸ್ ಟೀಮ್ ಟಾಕ್ ಸಂಗಮ ಯಶಸ್ವಿ

ರೆಂಜ: SჄS ಜಿಲ್ಲಾ ಸಮಿತಿ ಸುತ್ತೋಲೆ ಹಾಗೂ ಝೋನ್ ಸಮಿತಿಯ ನಿರ್ದೇಶನದಂತೆ ಎಸ್ ವೈ ಎಸ್ ರೆಂಜ ಸರ್ಕಲ್‌ನಲ್ಲಿ ‘ಸಿ’ ಟೀಮ್ ಟಾಕ್ ಲೀಡರ್ಸ್ ಮೀಟ್ ಹಾಗೂ ಕಡತ ನಿರ್ವಹಣಾ ತರಗತಿ ನಡೆಯಿತು.ಸರ್ಕಲ್ ಅಧ್ಯಕ್ಷರಾದ ಅಬ್ದುರ್ರಝಾಕ್ ಹಿಮಮಿ ಬೇರಿಕೆ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಬ್ಬಾಸ್ ಮದನಿ ರೆಂಜ ಉದ್ಘಾಟಿಸಿದರು.

‘ಕಡತ ನಿರ್ವಹಣೆ’ ಎಂಬ ವಿಷಯದಲ್ಲಿ ಝೋನ್ ಪ್ರ.ಕಾರ್ಯದರ್ಶಿ ಅಝೀಝ್ ಚೆನ್ನಾರ್ ತರಗತಿ ಮಂಡಿಸಿದರು.

ಲೀಡರ್ಸ್ ಮೀಟ್ ನಲ್ಲಿ ಮುಖ್ಯ ಪ್ರಭಾಷಣಗೈದ ಝೋನ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಮಾತನಾಡಿ ನಾಯಕತ್ವದ ಬಗ್ಗೆ ನಿರರ್ಗಳವಾಗಿ ಮಾತನಾಡಿ ಸಭಿಕರಲ್ಲಿ ಆವೇಶವನ್ನುಂಟುಮಾಡಿದರು.ಸಭೆಯ ಕೊನೆಯಲ್ಕಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ‌ರವರ ಹೆಸರಲ್ಲಿ ತಹ್ಲೀಲ್ ಮಜ್ಲಿಸ್ ಸಂಘಟಿಸಲಾಯಿತು.

ಝೋನ್ ನಾಯಕರಾದ ಫವಾಝ್ ಕಟ್ಟತ್ತಾರ್, ಶಾಹುಲ್ ಹಮೀದ್ ಕಬಕ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಕೊನೆಯಲ್ಲಿ ಅಬ್ಬಾಸ್ ಮದನಿಯವರ ಕೂಟು ಪ್ರಾರ್ಥನೆಯೊಂದಿಗೆ ತಬರ್ರುಕ್ ವಿತರಣೆ ನಡೆಯಿತು.ಬದ್ರ್ ಶುಹದಾಗಳ ಅಸ್ಮಾಉಲ್ ಹುಸ್ನಾ ದೊಂದಿಗೆ ಆರಂಬಿಸಿದ ಸಭೆಗೆ ಹಾಜರಾದ ಎಲ್ಲರನ್ನು ಪ್ರಧಾನ ಕಾರ್ಯದರ್ಶಿ ಇರ್ಫಾನ್ ಹಿಮಮಿ ಸ್ವಾಗತಿಸಿ,ದಅವಾ ಅಶ್ರಫ್ ಸಖಾಫಿ ಧನ್ಯವಾದ ಅರ್ಪಿಸಿದರು.

m