ಇನ್ನೂ ಮುಂದಕ್ಕೆ ಪೌಷ್ಟಿಕ ಆಹಾರ ಇಡ್ಲಿ ಸಾಂಬಾರ್ ; ಇಂದಿನಿಂದ ವಿತರಣೆ ಆರಂಭ
ಸುಳ್ಯ : ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಒಳ ರೋಗಿಗಳಿಗೆ ಬೆಳಗ್ಗಿನ ಉಪಹಾರ ವಾಗಿ ಬ್ರೆಡ್ ನೀಡಲಾಗುತ್ತಿತ್ತು.ಇದು ರೋಗಿಗಳ ಮತ್ತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.
ಈ ಬಗ್ಗೆ ಹಲವಾರು ಸಲ ಆರೋಗ್ಯ ರಕ್ಷಾ ಸಮಿತಿ ಯಿಂದ ಸಂಬಂದ ಪಟ್ಟವರಿಗೆ ಮನವಿ ಮತ್ತು ಒತ್ತಾಯ ಮಾಡುತ್ತಾ ಬಂದಿದ್ದರು, ಆರೋಗ್ಯ ರಕ್ಷಾ ಸಮಿತಿ ಇ ಬಗ್ಗೆ ಸಭೆ ಸೇರಿ ಖಾದ್ಯ ಬದಲಾವಣೆ ಬಗ್ಗೆ ನಿರ್ಣಯ ಮಾಡಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ ಮುಖಾಂತರ ಆರೋಗ್ಯ ಸಚಿವ ರಿಗೆ ಮನವಿ ನೀಡಲಾಗಿತ್ತು.

ಇದೀಗ ಮನವಿಗೆ ಸ್ಪಂದನೆ ದೊರಕಿದ್ದು. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಇಂದಿನಿಂದ (11/07/2025) ಬೆಳಗಿನ ಉಪಹಾರ ಬ್ರೆಡ್ ಬದಲು ಪೌಷ್ಟಿಕ ಆಹಾರ ಇಡ್ಲಿ ಸಾಂಬಾರ್ ನೀಡಲಾಗುತ್ತದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಕರುಣಾಕರ ಕೆ.ವಿ. ಯವರು ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್(ಪ್ರಗತಿ) ಶಹೀದ್ ಪಾರೆ, ಚಂದ್ರನ್ ಕೂಟೇಲ್ ಮೊದಲಾದವರು ಉಪಸ್ಥಿತರಿದ್ದರು





m

