Featured, ಅಂಕಣ, ಅಂತರಾಷ್ಟ್ರೀಯ

ಅಹಮದಾಬಾದ್ ವಿಮಾನ ಅಪಘಾತ: ಎಂಜಿನ್‌ಗಳ ಸ್ಥಗಿತವೇ ದುರಂತಕ್ಕೆ ಕಾರಣ – ಪ್ರಾಥಮಿಕ ವರದಿ ಬಹಿರಂಗ

ನವದೆಹಲಿ, ಜುಲೈ 9:ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನದ ಕುರಿತು ಪ್ರಾಥಮಿಕ ತನಿಖಾ ವರದಿ ಇದೀಗ ಹೊರಬಿದ್ದಿದ್ದು, ಸಾಕಷ್ಟು ಮಹತ್ವದ ಅಂಶಗಳನ್ನು ಒಳಗೊಂಡಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಮಂಡಿಸಿದ 15 ಪುಟಗಳ ವರದಿಯಲ್ಲಿ ಘಟನೆಗೆ ಕಾರಣವಾದ ತಾಂತ್ರಿಕ ದೋಷಗಳು ಮತ್ತು ಪೈಲಟ್‌ಗಳ ನಡುವೆ ನಡೆದ ಸಂಭಾಷಣೆ ಮೊದಲಾದ ಅಂಶಗಳನ್ನು ಉಲ್ಲೇಖಿಸಲಾಗಿದೆ.

ವರದಿಯ ಪ್ರಕಾರ, ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳು ನಿಂತುಹೋಗಿದ್ದವು. ಪ್ರಮುಖವಾಗಿ, ಇಂಧನ ಪೂರೈಕೆ ನಿಂತಿರುವುದು ಈ ಸ್ಥಗಿತಕ್ಕೆ ಕಾರಣವಾಗಿದೆ ಎಂದು ಎಎಐಬಿ ವರದಿ ಸೂಚಿಸಿದೆ. ಟೇಕ್‌ಆಫ್ ಸಮಯದಲ್ಲಿ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ‘RUN’ ನಿಂದ ‘CUTOFF’ ಗೆ ಬದಲಾದವು – ಈ ಬದಲಾವಣೆ ಕೇವಲ ಒಂದು ಸೆಕೆಂಡ್‌ನ ಒಳಗೆ ಸಂಭವಿಸಿದೆ ಎಂಬುದೇ ದುರಂತದ ತೀವ್ರತೆಯ ಸ್ಪಷ್ಟಚಿತ್ರ.

ಇನ್ನು, ಪೈಲಟ್‌ಗಳ ನಡುವೆ ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆಯು ಘಟನೆಯ ತೀವ್ರತೆಯನ್ನು ಇನ್ನಷ್ಟು ಎತ್ತಿಹಿಡಿಯುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ (CVR) ಪ್ರಕಾರ, ಒಬ್ಬ ಪೈಲಟ್, “ನೀವು ಎಂಜಿನ್ ಆಫ್ ಮಾಡಿದ್ದೀರಾ?” ಎಂದು ಕೇಳಿದಾಗ, ಇನ್ನೊಬ್ಬರು “ನಾನು ಏನೂ ಮಾಡಲಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ, ಯಾರಿಂದಲೂ ಉದ್ದೇಶಪೂರ್ವಕವಾಗಿ ಇಂಧನ ಕಡಿತಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಪೈಲಟ್‌ಗಳು ತುರ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಕೂಡಲೇ ವಿಮಾನದ ಸುರಕ್ಷತಾ ವ್ಯವಸ್ಥೆಗಳಾದ ರಾಮ್ ಏರ್ ಟರ್ಬೈನ್ (RAT), ತುರ್ತು ಫ್ಯಾನ್ ಹಾಗೂ ಎಪಿಯು ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲು ಪ್ರಯತ್ನಿಸಿದರು. ಆದರೆ ಎಂಜಿನ್‌ಗಳ ಸ್ಥಗಿತದ ಪರಿಣಾಮ, ಈ ಕ್ರಮಗಳಿಂದ ವಿಮಾನವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ವಿಮಾನದ ವಿದ್ಯುತ್ ಸರಬರಾಜು ಕೂಡ ಆ ಸಮಯದಲ್ಲಿ ಗಡಿಪಾರಾಗಿದ್ದ ಕಾರಣ RAT ಸಕ್ರಿಯಗೊಂಡಿತ್ತು.

ಆದರೂ, ಈ ವರದಿ ಪ್ರಾಥಮಿಕ ಹಂತದದ್ದಾಗಿದ್ದು, ಸಂಪೂರ್ಣ ತನಿಖೆ ಮುಂದುವರೆದಿದೆ ಎಂದು ಎಎಐಬಿ ಸ್ಪಷ್ಟಪಡಿಸಿದೆ.

m

Related Posts