Featured, ಅಂಕಣ, ಸ್ಥಳೀಯ

ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಬೇಕಾದರೆ ಗಾಜಾ ಯುದ್ಧ ನಿಲ್ಲಿಸಲಿ: ಫ್ರೆಂಚ್ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಲು ಬಯಸಿದರೆ, ಅವರು ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸಲಿ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ನಿನ್ನೆ ಸೆ.23 ದೂರದರ್ಶನ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರನ್, ಮಾತನಾಡಿ “ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಶಕ್ತಿ ಟ್ರಂಪ್‌ಗೆ ಮಾತ್ರ ಇದೆ. ಈ ಸಂಘರ್ಷದಲ್ಲಿ ಏನಾದರೂ ಮಾಡಬಹುದಾದ ಯಾರಾದರೂ ಇದ್ದರೆ, ಅದು ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ” ಎಂದು ಹೇಳಿದರು.

ಈ ಯುದ್ಧವನ್ನು ಮಾಡಲು ಗಾಜಾದಲ್ಲಿ ಯುದ್ಧ ನಡೆಸಲು ನಾವು ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಮಾಡುತ್ತದೆ ಎಂದಿದ್ದಾರೆ.

ನಿನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ತಾವು ಶಾಂತಿಯನ್ನು ಬಯಸುವುದಾಗಿ ಪುನರುಚ್ಚರಿಸಿದರು.

ಟ್ರಂಪ್ ಅವರು ಏಳು ಸಂಘರ್ಷಗಳನ್ನು ನಿಲ್ಲಿಸಿದ್ದಾರೆ. ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬೇಕಾದರೆ, ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸಿದರೆ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಸಾಧ್ಯ, ”ಎಂದು ಮ್ಯಾಕ್ರನ್ ಹೇಳಿದರು.

m

Related Posts