ಬೆಂಗಳೂರು: ಮೀಮ್ ಫೆಲಿಬ್ರೇಶನ್ನ ಭಾಗವಾಗಿ ಪ್ರವಾದಿ ಮುಹಮ್ಮದ್ ನಬಿಯವರನ್ನು ಆಧಾರವಾಗಿಸಿಕೊಂಡು ನಡೆದ ಕನ್ನಡ ಮೀಮ್ ಕವಿಗೋಷ್ಠಿಗೆ ಬೆಂಗಳೂರಿನಲ್ಲಿ ಪರ್ಯವಸಾನವಾಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮುಡ್ನಾಗುಡು ಚಿನ್ನಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
“ಕವಿತೆ ಸತ್ಯ ಮತ್ತು ಸೌಂದರ್ಯದ ಸಂಗಮ. ಹಳೆಯ ಕಾಲದ ಸೂಫಿಗಳು ತಮ್ಮ ಆಧ್ಯಾತ್ಮಿಕ ಭಾವನೆಗಳನ್ನು ಕವಿತೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದರು. ಕವಿಗಳನ್ನು ಪ್ರವಾದಿ ಪ್ರೋತ್ಸಾಹಿಸಿದ ಕಾರಣವೂ ಇದೇ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕನ್ನಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ,“ಕವಿತೆ ಜೀವನದ ಕನ್ನಡಿ. ಜೀವನಾನುಭವಗಳು, ಸಂತೋಷಗಳು, ಸತ್ಯ, ಅಮಾನುಷತೆ – ಇವು ಭಾವನೆಯ ಜಾಲಕ್ಕೆ ಇಳಿದಾಗ ಕವಿತೆಯ ಸೌಂದರ್ಯ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ನಾಲ್ಕು ವಿಭಿನ್ನ ಅವಧಿಗಳಲ್ಲಿ 40 ಕ್ಕೂ ಹೆಚ್ಚು ಕವಿತೆಗಳು ಮಂಡಿಸಲ್ಪಟ್ಟವು. ಬಿ. ಎಂ. ಹನೀಫ್, ರಿಯಾಸ್ ಅಹ್ಮದ್ ಬೊಟೆ, ವೈ. ಜೆ. ಮಹ್ಬೂಬ್ ಗುಲ್ಬರ್ಗ, ಪುನೀತ್ ಅಪ್ಪು ಇವರುಗಳು ವಿವಿಧ ಸೆಷನ್ಗಳಿಗೆ ನೇತೃತ್ವ ನೀಡಿದರು. ಸ್ವಾಲಿಹ್ ತೋಡಾರ್, ಯಂಶಾ ಬೀಂಗಿಲ ಮುಂತಾದ ಪ್ರಮುಖ ಕವಿಗಳು ಪುಣ್ಯ ನಬಿಯ ಜೀವನದ ವಿಭಿನ್ನ ಕ್ಷಣಗಳನ್ನು ಆಧರಿಸಿ ಕವಿತೆಗಳನ್ನು ವಾಚಿಸಿದರು.
ಅಡ್ವ. ಸುಹೈಲ್ ಸಖಾಫಿ, ಎಸ್. ಎಸ್. ಎಫ್. ಕರ್ನಾಟಕ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಇವರು ಶುಭಾಶಯ ಕೋರಿದರು.
ಅಲ್ ವಾರಿಸ್ ಶರೀಫ್ ಸಖಾಫಿ ಸ್ವಾಗತಿಸಿ, ಅಲ್ ವಾರಿಸ್ ಅಸ್ಲಂ ಉಳ್ಳಾಳ್ ಧನ್ಯವಾದಗಳನ್ನು ಅರ್ಪಿಸಿದರು.
ಫೋಟೋ: ಬೆಂಗಳೂರಿನಲ್ಲಿ ನಡೆದ ಕನ್ನಡ ಮೀಮ್ ಕವಿಗೋಷ್ಠಿಯನ್ನು ಮುಡ್ನಾಗುಡು ಚಿನ್ನಸ್ವಾಮಿ ಉದ್ಘಾಟಿಸುತ್ತಿರುವ ದೃಶ್ಯ.





m
