” ಯಾಣ ದಲ್ಲೊಂದು ನಮ್ಮ ಪಯಣ “
ನಾವು ನಮ್ಮ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಯಾಣ ಕ್ಕೆ ಪ್ರವಾಸಕ್ಕೆ ಹೊರಟೆವು . ಯಾಣ ಎಂತಹ ಅದ್ಭುತ ಪ್ರೇಕ್ಷಣೀಯ ಸ್ಥಳ ಎಂದರೆ ವರ್ಣಿಸಲು ಅಸಾಧ್ಯ . ಎಂತಹ ಪ್ರಕೃತಿ ನಾಸ್ತಿಕರು ಕೂಡ ಪ್ರಕೃತಿ ಯ ರಮಣೀಯ ಸೌಂದರ್ಯದ ಮುಂದೆ ತಲೆಬಾಗಿಸಿ ತನ್ನನ್ನೇ ತನು ಮರೆತುಬಿಡುವ ಅದ್ಭುತ ತಾಣ ಈ ಯಾಣ .
ಗಗನವನ್ನೇ ಚುಂಬಿಸುವ ಏಕ ಶಿಲಾ ವಿನ್ಯಾಸ ಯಾತ್ರೀಕರನ್ನು ಮೌನಿಯಾಗಿಸುತ್ತವೆ. ಕಲಾವಿದನ ಕೈ ಚಳಕದಲ್ಲಿ ಕುಸುರಿಯ ಕೆತ್ತನೆಯಂತೆ ಯಾತ್ರಿಕನನ್ನು ನಿಬ್ಬೆರಾಗಗಿಸುತ್ತದೆ ಎತ್ತ ನೋಡಿದರು ತಲೆ ಎತ್ತಿ ನಿಂತ ಕಪ್ಪು ಶಿಲಾ ವಿನ್ಯಾಸಗಳು ಮನಸ್ಸನ್ನು ಮುದಗೊಳಿಸುತ್ತವೆ. ಅಚ್ಚ ಹಸುರಿನ ಪ್ರಕೃತಿ, ಶಿಲೆಗಳ ಸೌಂದರ್ಯಕ್ಕೆ ಮೆರಗು ಇಮ್ಮಡಿಗೊಳಿಸುತ್ತವೆ .
ವರನಟ ರಾಜರವರ ಹಾಡಿನ ಒಂದು ಸಾಲು ನೆನಪಾಗುವುದಂತೂ ಸತ್ಯ
” ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ ಸಾಯೋದ್ರೊಳಗೆ ಒಮ್ಮೆ ನೋಡು ಈ ಯಾಣ ”
ಸುಮಾರು ಒಂದೂವರೆ ಕಿಲೋಮೀಟರ್ ಚಾರಣ ಮಾಡುತ್ತ ಹೊರಟರೆ ದಾರಿಯುದ್ಧಕ್ಕೂ ಚಲುವಿನಲ್ಲಿ ನಾನೇನು ಕಡಿಮೆ ಇಲ್ಲ ಇದು ವಯ್ಯಾರದಲ್ಲಿ ಸಾಗುವ ಝರಿ ತೊರೆಗಳು , ಪಾರ್ವತಗಳಿಂದ ಮಾನವನಿಗೆ ಔಷಧವೇ ನೀರಿನ ರೂಪದಲ್ಲಿ ಹರಿಯುತ್ತಿದೆಯೇನು ಅನ್ನಿಸುವುದಂತೂ.ಸತ್ಯ ಬೊಗಸೆ ಯಲ್ಲಿ ಹಿಡಿದು ಕುಡಿದಾಗ ಅಮೃತ ಸವಿದಷ್ಟು ಆನಂದವಾಯಿತು. ಸುಮಾರು 300 ಮೆಟ್ಟಿಲುಗಳು ಇರಬಹುದು ಮೆಟ್ಟಿಲೇರುವಾಗ ಸ್ವಲ್ಪ ತ್ರಾಸವಾದರೂ ಹೋಗಿ ತಲುಪಿದ ಮೇಲೆ ಸ್ವರ್ಗಕ್ಕೆ ತಲುಪಿದಷ್ಟು ಮಹದಾನದವಾಗುತ್ತದೆ ಬೆಟ್ಟದ ಮೇಲೆ ಬಂಡೆಯೊಂದನ್ನು ಕೊರೆದು ಒಂದು ದೇವಾಲಯ ಇದೆ ನೋಡಲು ಚಿಕ್ಕದಾದರೂ ಸುಂದರ ಅತಿ ಸುಂದರ ನಮಗಂತೂ ಏನನ್ನು ಸಾಧಿಸಿದಷ್ಟು ಖುಷಿ ಆಯಿತು. ಯಾಣ ಅಂದರೆ ಏಕ ಶಿಲ ವಿನ್ಯಾಸಗಳು ತಾತ್ರೀಕರನ್ನ ಕೈಬೀಸಿ ಕರೆಯುತ್ತವೆ .
ಚಾರಣ ಪ್ರಿಯರಿಗೆ ತುಂಬಾ ತುಂಬಾ ಖುಷಿಯನ್ನು ತಂದುಕೊಡುವ ಪ್ರೇಕ್ಷಣೀಯ ಸ್ಥಳ . ಯಾರಾದರು ಉತ್ತರಕನ್ನಡ ಜಿಲ್ಲೆಯ ಪ್ರವಾಸಕ್ಕೆ ಹೊರಟರೆ ಒಮ್ಮೆ ನೀವು ನೋಡಿ ಸಾಧ್ಯವಾದಷ್ಟು ಕಣ್ ಮನ ಸಂತೋಷ ಪಡಿ
ಯಾಣ ನಿನ್ನ ನೋಡಿ ಆಯಿತು ನಮ್ಮ ಮನ ಸೋಪಾನ…
ಲೇಖನ: ಭಾಗ್ಯರಮೇಶ್. ಕೆ ಶಿಕ್ಷಕಿ ಪಿ. ಎಮ್. ಶ್ರೀ / ಸ. ಮಾ. ಪ್ರಾ. ಶಾಲೆ. ಕುಶಾಲನಗರ






m
