ಅಂದುಕೊಳ್ಳೊವ್ರು ಅಂದುಕೊಳ್ಳಿ
ಅಂದುಕೊಳ್ಳೋವ್ರು ತಂದು ಹಾಕಲ್ಲ,ಬಂದು ಕೊಡಲ್ಲ,ನೀವು ಮುಂದು ಹೋಗಿ.
ಕಷ್ಟಗಳನ್ನು ಎದುರಿಸಿ
ತಪ್ಪುಗಳನ್ನು ಸರಿಪಡಿಸಿ
ನೋವುಗಳನ್ನು ಅನುಭವಿಸಿ
ಎಲ್ಲವನ್ನೂ ಸ್ವೀಕರಿಸಿ
ಬಾಳುವುದೇ ಜೀವನ
ಮರೆಯಲಾಗದ ನೆನಪುಗಳು
ಮರೆಯಲಾಗದ ಮಾತುಗಳು
ಮರೆಯಲಾಗದ ಅವಮಾನಗಳು
ಇದೆಲ್ಲವನ್ನೂ ಮರೆತು ಬದುಕುವುದೇ ಜೀವನ
ಮಕ್ಕಳಾಟದ ದಿನಗಳು
ಸುಂದರವಾದ ಕ್ಷಣಗಳು
ಬಾಲ್ಯದ ನೆನಪುಗಳು
ಅಜ್ಜ ಅಜ್ಜಿಯ ಕಥೆಗಳು
ಇವೆಲ್ಲವೂ ಮರಳಿ ಬಾರದ ದಿನಗಳು
ಆ ದಿನಗಳಲ್ಲಿ ದ್ವೇಷಗಳಿಲ್ಲ
ಆ ದಿನಗಳಲ್ಲಿ ಕೋಪಗಳಿಲ್ಲ
ಆ ದಿನಗಳಲ್ಲಿ ಜಾತಿಗಳಿಲ್ಲ
ಇರುವುದು ಒಂದೇ ಪ್ರೀತಿ ಮಾತ್ರ
ಈ ಚಂದದ ಜೀವನ
ನೆಮ್ಮದಿಯಿಂದ ಬಾಳೋಣಾ
ಮನಸ್ತಾಪಗಳನ್ನ ಮರೆಯೋಣಾ
ಪ್ರೀತಿಯನ್ನ ಹಂಚೋಣ
ಕವನ: ಸಿನಾನ್ ಬಾರಿಕ್ಕಾಡ್




m
