2025 ರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸರ್ಕಾರವು ಜಾರಿಗೆ ತರುವ ಸಲುವಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ವೇಳೆಯೆ ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಸಂಘಟನೆಗಳು ಮತ್ತು ಕೆಲವೊಂದು ರಾಜಕೀಯ ಪಕ್ಷಗಳು ತೀವ್ರವಾಗಿ ಹೋರಾಟ,ಪ್ರತಿಭಟನೆ ನಡೆಸಿದರು. ಅಲ್ಲದೆ ಅವರು ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.
ಇತ್ತೀಚೆಗೆ ಈ ಎಲ್ಲಾ ಅರ್ಜಿಯನ್ನು ವಿಚಾರಣೆಗೆ ತೆಗೆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗವಾಯಿರವರ ನೇತೃತ್ವದ ಪೀಠ ಕೆಲವೊಂದು ಮಹತ್ತರವಾದ ಆದೇಶಗಳನ್ನು ಹೊರಡಿಸುವುದರ ಮೂಲಕ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಜೊತೆಗೆ ಧಾರ್ಮಿಕ ಹಕ್ಕುಗಳಿಗೆ ಜೀವ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಗವಾಯಿ ರವರು ಪ್ರಕಟಿಸಿದ ತೀರ್ಪಿನಲ್ಲಿ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
2025ರ ತಿದ್ದುಪಡಿ ಕಾಯ್ದೆ ಪ್ರಕಾರ ಮೊದಲು ಯಾವುದೇ ಆಸ್ತಿಯನ್ನು ಅದು ವಕ್ಫ್ ಆಸ್ತಿಯೋ ಅಲ್ಲವೋ ಎಂದು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು, ಆದರೆ ತೀರ್ಪಿನಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನು ರದ್ದುಗೊಳಿಸಲಾಗಿದೆ.ಅದೇ ರೀತಿ ವಕ್ಫ್ ಆಸ್ತಿಯನ್ನು ದಾನ ಮಾಡುವ ವ್ಯಕ್ತಿಯು ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮದ ಅನುಯಾಯಿಯಾಗಿರಬೇಕೆಂಬ ವಿಚಿತ್ರ ಷರತ್ತಿತ್ತು ಅದನ್ನು ಕೂಡ ನ್ಯಾಯಾಲಯವು ರದ್ದುಗೊಳಿಸಲಾಗಿದೆ.ಇವೆರಡರ ಕುರಿತು ರಾಜ್ಯ ಸರ್ಕಾರ ಕಾನೂನು ರಚಿಸುವವರೆಗೆ ಜಾರಿಗೆ ತರಬಾರದು ಎಂದು ಗವಾಯಿರವರ ನ್ಯಾಯಪೀಠ ಹೇಳಿದೆ.ಅಲ್ಲದೆ ಈ ರೀತಿಯ ತೀರ್ಮಾನಗಳು ಇನ್ನು ಮುಂದೆ ನ್ಯಾಯಾಲಯದ ಮೂಲಕ ಅಥವಾ ವಕ್ಫ್ ನ್ಯಾಯ ಮಂಡಳಿಯ ಮೂಲಕವೇ ಹೊರಬರಬೇಕೆಂಬ ಜೊತೆಗೆ ವಿಚಾರಣೆ ಮುಗಿಯುವವರೆಗೆ ಮೂರನೇ ವ್ಯಕ್ತಿಗೆ ಯಾವುದೇ ರೀತಿಯಾದ ಅಧಿಕಾರವನ್ನು ನೀಡಬಾರದು ಎಂದೂ ಆದೇಶಿಸಿದೆ.ಅಲ್ಲದೆ ಈ ರೀತಿಯ ತೀರ್ಮಾನಗಳು ಇನ್ನು ಮುಂದೆ ನ್ಯಾಯಾಲಯದ ಮೂಲಮುಂದುವರೆದ ತೀರ್ಪಿನಲ್ಲಿ ಸರ್ಕಾರ ಕೇಂದ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಮತ್ತು ರಾಜ್ಯದಲ್ಲಿ ಮೂರಕ್ಕಿಂತ ಹೆಚ್ಚಿನ ಮುಸ್ಲಿಮರಲ್ಲದ ಸದಸ್ಯರನ್ನು ವಕ್ಫ್ ಮಂಡಳಿಯಲ್ಲಿ ನೇಮಿಸಿಕೊಳ್ಳಬಾರದು.
ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕಾತಿಗಳಲ್ಲಿ ಮುಸ್ಲಿಮರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಹ ಉಲ್ಲೇಖಿಸಿದೆ.ಸಂವಿಧಾನದಲ್ಲಿ ತಿದ್ದುಪಡಿ ಮಾಡುತ್ತಾ ತನ್ನದೇ ಪಕ್ಷದ ಮನುವಿನ ಸೈದಾಂತಿಕ ವಿಚಾರಧಾರೆಗಳು ಮತ್ತು ಕಾನೂನುಗಳನ್ನು ತರುವಂತಹ ಬಣಕ್ಕೆ ತೀವ್ರ ಪೆಟ್ಟು ಬಿದ್ದಿದೆ.ಒಂದು ಧರ್ಮವನ್ನು ಮಾತ್ರ ಗುರಿಯಾಗಿಸಿಕೊಂಡು ಮತ್ತೊಂದು ಧರ್ಮದ ಮನಗೊಳಿಸಲು ಬೇಕಾಗಿ, ಚುನಾವಣಾ ಗೆಲುವಿಗಾಗಿ ನಡೆಸುವಂತಹವರಿಗೆ ಕೂಡ ಸರ್ವೋಚ್ಚ ನ್ಯಾಯಾಲಯದ ಪ್ರಸ್ತುತ ತೀರ್ಪಿನಿಂದ ತೀವ್ರ ನೋವಾಗಿದೆ ಎಂಬುದು ಸ್ಪಷ್ಟ.ಈ ತೀರ್ಪು ಕೇವಲ ಒಂದು ಧರ್ಮಕ್ಕೆ ಸಿಕ್ಕಿದ ಜಯವಲ್ಲ.ಹೊರತು ದೇಶದಲ್ಲಿ ಕಾನೂನು ಮತ್ತು ಸಂವಿಧಾನದಲ್ಲಿ ವಿಶ್ವಾಸ ಇರುವ ಅದೆಷ್ಟು ಅಲ್ಪಸಂಖ್ಯಾತರಿಗೆ ಭರವಸೆಯನ್ನು ಸಹ ನೀಡಿದೆ.
ಬರಹ: ಆಶಿಕ್ ಕೊಡಗು




m
