ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ 05 ಬನ್ನೂರು ಚೆಲುವಮ್ಮನ ಕಟ್ಟೆ ರಸ್ತೆಯ ಲಕ್ಕಿ ಸ್ಟಾರ್ ಕಾಂಪೌಂಡ್ ಬಳಿಯ ಇಂಟರ್ ಲಾಕ್ ರಸ್ತೆಯನ್ನು ಸಪ್ಟೆಂಬರ್ 19 ರಂದು ಉದ್ಘಾಟಿಸಲಾಯಿತು. ಸ್ಥಳೀಯ ನಗರಸಭಾ ಸದಸ್ಯೆ ಕೆ ಫಾತಿಮತ್ ಝೂರಾ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಕಾರ್ಯದರ್ಶಿ ಉಸ್ಮಾನ್ ಏ ಕೆ, ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಮಾಜಿ ಅಧ್ಯಕ್ಷರಾದ ಮೊಯ್ದೀನ್ ಹಾಜಿ ಬನ್ನೂರು, ಬದ್ರಿಯಾ ಕಮಿಟಿ ಸೌದಿ ಅರೇಬಿಯಾ ಅಧ್ಯಕ್ಷರಾದ ಸಾದಿಕ್ ಮಾರ್ನಡ್ಕ, ಬದ್ರಿಯಾ ಕಮಿಟಿ ಕತಾರ್ ಅಧ್ಯಕ್ಷರಾದ ಹನೀಫ್ ಲಕ್ಕಿ ಸ್ಟಾರ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ಅಧ್ಯಕ್ಷರಾದ ಪವಾಝ್ ಬನ್ನೂರು, ಕಾರ್ಯದರ್ಶಿ ಮುಸ್ತಫಾ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ವಾರ್ಡ್ ಸಂಖ್ಯೆ 05 ಬೂತ್ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್, ಹಿರಿಯ ಸದಸ್ಯರಾದ ಸುಲೈಮಾನ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ಸಿಟಿ ಬೂತ್ ಸಮಿತಿ ಅಧ್ಯಕ್ಷ ರಾದ ಅಬ್ದುಲ್ ಆಸಿಫ್ PK, ಇರ್ಫಾಝ್, ಸಾದಿಕ್ MNS, ಹಂಝಾ ಮಾರ್ನಡ್ಕ, ಶರೀಫ್, ಸಾಬೀರ್ ಮತ್ತಿತರರು ಉಪಸ್ಥಿತರಿದ್ದರು.
ಇಫಾಝ್ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





m
