ಅರಂತೋಡು ನುಸ್ರರತುಲ್ ಇಸ್ಲಾಂ ಮದರಸದಲ್ಲಿ ಪೋಷಕರ ಸಭೆ ಯು ಜು 19ರಂದು ನಡೆಯಿತು ಕಾರ್ಯಕ್ರಮ ವನ್ನು ಬದ್ರಿಯಾ ಜುಮಾ ಮಸೀದಿಯ ಖತೀಬ ರಾದ ಬಹು, ಇಸ್ಮಾಯಿಲ್ ಪೈಝಿ ಗಟಮನೆ ಉದ್ಘಾಟಿಸಿ ನಾವು ಈಗ ಆದುನಿಕ ಯುಗ ದಲ್ಲಿದ್ದೇವೆ ಆದುನಿಕತೆಗೆ ತಕ್ಕಂತೆ ನಮ್ಮ ಮದ್ರಸ ಶಿಕ್ಷಣ ಪದ್ಧತಿ ಯನ್ನು ಬದಲಾವಣೆಮಾಡ ಬೇಕಾಗಿದೆ ಈಗಾಗಲೇ ಸಮಸ್ತ ಮತ ವಿದ್ಯಭ್ಯಾಸ ಬೋರ್ಡ್ ಮದ್ರಸ ಶಿಕ್ಷಕರಿಗೆ ತರಬೇತಿ ಗಳನ್ನು ನೀಡಿ ಡಿಜಿಟಲ್ ತರಗತಿಗಳನ್ನು ತೆರೆಯಲು ಸೂಚಿಸಿದೆ ಎಂದರು, ನಿವೃತ ಉಪನ್ಯಾಸಕಹಾಜಿ ಎ ಅಬ್ದುಲ್ಲ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೇಕು ಮದರಸ ಪರ ಲೋಕಕ್ಕೆ ಉಪಯುಕ್ತ ವಾದ ಧಾರ್ಮಿಕ ವಿದ್ಯೆಯನ್ನು ಕಲಿಸುವ ಕೇಂದ್ರ ಇಲ್ಲಿನ ಜೀವನ ಮುಗಿಸಿದ ನಂತರ ಪರ ಲೋಕ ಜೀವನವೇನಮಗೆ ಶಾಶ್ವತ ಎಂದರು.

ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು ಸದರ್ ಮುಅಲ್ಲಿಮ್ ಅಶ್ರಫ್ ಮುಸ್ಲಿಯಾರ್ ಅಡ್ಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು ಸಹಾಯಕ ಅದ್ಯಾಪಕ ಅಬ್ದುಲ್ ರಹಿಮಾನ್ ಕುಂಬ್ರ ಸಭೆಯನ್ನು ಉದ್ದೇಶಿಸಿ ಮಾತಾನ್ನಾಡಿದರು, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮಹಮ್ಮದ್, ಕಾರ್ಯದರ್ಶಿ ಕೆ ಎಂ ಮುಸಾನ್, ಕೋಶಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಮದರಸ ಸಮಿತಿ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಹಾಜಿ ಅಬ್ದುಲ್ ಖಾದರ್ ಪಟೇಲ್, ಸಂಶುದ್ದಿನ್ ಪೆಲ್ತಡಕ್ಕ, ಮೊಯಿದು ಕುಕ್ಕುಂಬಳ, ತಾಜುದ್ದಿನ್, ಹನೀಫ್ ಕುನ್ನಿಲ್ ಮೊದಲಾದವರು ಉಪಸ್ಥಿತರಿದ್ದರು, ಅಮೀರ್ ಕುಕ್ಕುಂಬಳ ಸ್ವಾಗತಿಸಿ ಕೆ ಮುಸಾನ್ ವಂದಿಸಿದರು.





m
